ರಾಯಚೂರು: ಅಕ್ರಮವಾಗಿ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ 8 ಲಕ್ಷ ರೂಪಾಯಿ ಮೌಲ್ಯದ ಪಡಿತರ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರಾಯಚೂರಿನ ಸಿರವಾರ ತಾಲೂಕಿನ ಹಾಲಾಪುರದಿಂದ ಸಾಗಿಸುತ್ತಿದ್ದಾಗ ರೇಡ್ ಮಾಡಲಾಗಿದೆ. 600 ಚೀಲಗಳು ಪೊಲೀಸ್ ವಶಕ್ಕೆ! ಕವಿತಾಳ-ಮಸ್ಕಿ ರಸ್ತೆಯ ಜಂಗಮರ ಹಳ್ಳಿ ಕ್ರಾಸ್ ಬಳಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಲಾರಿಯನ್ನು ಹಿಂಬಾಲಿಸಿದ ವೇಳೆ 600 ಅಕ್ಕಿ ಚೀಲಗಳಿದ್ದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಸುಮಾರು 8 ಲಕ್ಷ ರೂ. ಮೌಲ್ಯದ 30 ಟನ್ ಅಕ್ಕಿಯಿದ್ದ ಚೀಲಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಾನ್ವಿ ತಾಲೂಕು ಆಹಾರ ನಿರೀಕ್ಷಕ ದೇವರಾಜ್ ದೂರು ನೀಡಿದ್ದು, ದಾಳಿ ವೇಳೆ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಆರೋಪಿ ವಿರೇಶ್ ಹಾಲಾಪುರ ಪರಾರಿಯಾಗಿದ್ದಾನೆ. ಈ ಬಗ್ಗೆ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

