Breaking News

ಹಾಸನದಲ್ಲಿ ಲಾರಿಗೆ ಹಿಂಬದಿಯಿಂದ ‘KSRTC’ ಬಸ್ ಡಿಕ್ಕಿ : ಪ್ರಯಾಣಿಕರಿಗೆ ಗಂಭೀರ ಗಾಯ!

ಹಾಸನದಲ್ಲಿ ಭೀಕರ ಅಪಘಾತ ಸಂಬಂಧಿಸಿದ್ದು, ಲಾರಿಗೆ ಹಿಂಬದಿಯಿಂದ ಸಾರಿಗೆ ಬಸ್ ಡಿಕ್ಕಿಯಾಗಿ ಹಲವು ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಸಮೀಪ ಈ ಒಂದು ಅಪಘಾತ ಸಂಭವಿಸಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿಯಲ್ಲಿ ಬೆಂಗಳೂರಿನಿಂದ ಹಾಸನದ ಕಡೆಗೆ ಲಾರಿ ಹಾಗೂ ಬಸ್ ಬರುತ್ತಿತ್ತು. ಸಾರಿಗೆ ಬಸ್ ಚಾಲಕ ನಿದ್ದೆ ಮಂಪರಿನಲ್ಲಿ ಲಾರಿಗೆ ಡಿಕ್ಕಿ ಹೊಡೆದ ಶಂಕೆ ವ್ಯಕ್ತವಾಗಿದ್ದು, ಗಾಯಗೊಂಡ ಪ್ರಯಾಣಿಕರಿಗೆ ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Share News

About BigTv News

Check Also

ಅಕ್ರಮ ಕೊಜೆ ಮಣ್ಣು ಸಾಗಾಟದ ಟಿಪ್ಪರ್‌ ಢಿಕ್ಕಿ, ವಿದ್ಯಾರ್ಥಿಗಳು ಗಂಭೀರ : ಅಜಿತ್‌ ಶೆಟ್ಟಿ ಯಾಳಹಕ್ಲು ಸೇರಿ 3 ಮಂದಿ ಅರೆಸ್ಟ್‌

ಉಡುಪಿ: ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ ಅಕ್ಟೋಬರ್ 30ರಂದು ಎರಡು ಟಿಪ್ಪರ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಇಬ್ಬರು …

Leave a Reply

Your email address will not be published. Required fields are marked *