ಕನಕಪುರ: ಇಲ್ಲಿಯ ಬಸವೇಶ್ವರ ನಗರದ ಮನೆಯ ಬಾಗಿಲು ಮುರಿದ ಕಳ್ಳರ ₹9 ಲಕ್ಷ ಹಾಗೂ 51ಗ್ರಾಂ ಚಿನ್ನದ ಒಡವೆ, ಅರ್ಧ ಕೆ.ಜಿ ಬೆಳ್ಳಿ ಸಾಮಗ್ರಿಗಳನ್ನು ಕದ್ದು ಪರಾರಿಯಾಗಿದ್ದಾರೆ. ಸಂಬಂಧಿಕರು ಮೃತಪಟ್ಟ ಕಾರಣ ಜಯರಾಮು ಎಂಬುವರು ಏ.9 ರಂದು ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋದಾಗ ಕಳ್ಳತನ ನಡೆದಿದೆ.ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳರು ಮನೆಯ ಬಾಗಿಲು ಮತ್ತು ಕಬ್ಬಿಣದ ಗ್ರಿಲ್ ಬಾಗಿಲು ಮುರಿದು ಕಪಾಟಿನಲ್ಲಿದ್ದ ₹9 ಲಕ್ಷ ನಗದು ಹಾಗೂ ಚಿನ್ನದ ಹ್ಯಾಂಗಿಸ್, ಕಿವಿಯೋಲೆ, ಜುಮುಕಿ, ಚಿನ್ನದ ನಾಣ್ಯ, ಉಂಗುರ, ಚಿನ್ನದ ಸರ ಸೇರಿ ₹4 ಲಕ್ಷ ಮೌಲ್ಯದ 51 ಗ್ರಾಂ ಒಡವೆ, ₹50 ಸಾವಿರ ಮೌಲ್ಯದ ಅರ್ಧ ಕೆ.ಜಿ ಬೆಳ್ಳಿ ಸಾಮಗ್ರಿ ದೋಚಿ ಪರಾರಿಯಾಗಿದ್ದಾರೆ. ಜಯರಾಮು ಮರುದಿನ ಬಂದು ನೋಡಿದಾಗ ಮನೆಯ ಬಾಗಿಲು ಒಡೆದು ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳ ಮಹಜರು ನಡೆಸಿ, ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

