Breaking News

ಮಹಿಳೆ ಕೊಲೆ: ಸಹೋದರ, ಆತನ ಪುತ್ರ ಸೇರಿ ನಾಲ್ವರ ಸೆರೆ

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಸೋದರ ಸಂಬಂಧಿಗಳಿಂದಲೇ ತೀವ್ರ ಹಲ್ಲೆಗೆ ಒಳಗಾಗಿದ್ದ ಮಹಿ‍ಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತ ಮಹಿಳೆಯ ಸಹೋದರ ಸೇರಿ ನಾಲ್ವರು ಆರೋಪಿಗಳ ಬಂಧಿಸಲಾಗಿದೆ. ಆಡುಗೋಡಿ ನಿವಾಸಿಗಳಾದ ಮಣಿಕಂಠನ್‌ (48), ಈತನ ಪುತ್ರ ಕಿರಣ್‌ (26).ಈತನ ಸ್ನೇಹಿತರಾದ ಸ್ಟಿಫನ್‌ ಮತ್ತು ಅಭಿಷೇಕ್‌ ಬಂಧಿತರು. ಆರೋಪಿಗಳು ಮಾ.25ರಂದು ಆಡುಗೋಡಿಯ ಅಂಬೇಡ್ಕರ್‌ ನಗರ ನಿವಾಸಿ ಮಗೇಶ್ವರಿ (55) ಎಂಬಾಕೆ ಮೇಲೆ ತೀವ್ರ ಹಲ್ಲೆ ನಡೆಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಮಗೇಶ್ವರಿ ಅವರ ಮೊಮ್ಮಗಳನ್ನು ಮಣಿಕಂಠನ್‌ ಪುತ್ರ ಕಿರಣ್‌ ಮದುವೆಯಾಗಿದ್ದಾನೆ. ಕೌಟುಂಬಿಕ ವಿಚಾರಕ್ಕೆ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಇತ್ತು. ಹೀಗಾಗಿ, ಮಗೇಶ್ವರಿ ಮನೆಯಲ್ಲೇ ಮೊಮ್ಮಗಳು ಬಂದು ನೆಲಸಿದ್ದರು. ಈ ನಡುವೆ ಪುತ್ರನಿಗೆ ತಿಳಿವಳಿಕೆ ಹೇಳುವಂತೆ, ತಮ್ಮ ಸಹೋದರ ಮಣಿಕಂಠನ್‌ಗೆ ಕರೆ ಮಾಡಿ ಮಗೇಶ್ವರಿ ತಿಳಿಸಿದ್ದರು. ಅಲ್ಲದೆ, ಇತ್ತೀಚೆಗೆ ಕಿರಣ್‌ ಕೂಡ ಮಗೇಶ್ವರಿ ಮನೆಗೆ ಬಂದು ಪತ್ನಿಯನ್ನು ಕರೆದೊಯ್ಯಲು ಯತ್ನಿಸಿದ್ದಾನೆ. ಆಗ ಆಕೆ ಹೋಗಲು ನಿರಾಕರಿಸಿದ್ದಾರೆ. ಅದರಿಂದ ಕೋಪಗೊಂಡಿದ್ದ ಕಿರಣ್‌, ಮಾ.25ರಂದು ಸ್ನೇಹಿತರು ಹಾಗೂ ತನ್ನ ತಂದೆಯನ್ನು ಮಗೇಶ್ವರಿ ಮನೆಗೆ ಕರೆತಂದು ಗಲಾಟೆ ಮಾಡಿದ್ದಾರೆ. ಅದು ವಿಕೋಪಕ್ಕೆ ಹೋದಾಗ, ಆರೋಪಿಗಳು ಮಗೇಶ್ವರಿಗೆ ಚಾಕು ಇರಿದು, ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು. ತೀವ್ರ ಹಲ್ಲೆಗೊಳಗಾಗಿದ್ದ ಮಗೇಶ್ವರಿಯನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *