ಸಿ.ಎಸ್ ಪುರ(ಗುಬ್ಬಿ): ಅಕ್ರಮ ಮರಳು ಅಡ್ಡೆಯ ಮೇಲೆ ಸಿ.ಎಸ್. ಪುರ ಪೊಲೀಸರು ಸೋಮವಾರ ದಾಳಿ ನೆಡಸಿ ಟ್ರ್ಯಾಕ್ಟರ್ ಜಪ್ತಿ ಮಾಡಿ ಮರಳು ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜನ್ನೇನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಶಿಂಷಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಪಿಎಸ್‌ಐ ಧರ್ಮಾಂಜಿ ಹಾಗೂ ಸಿಬ್ಬಂದಿ ವಾಹನ ಸಂಖ್ಯೆ ಇಲ್ಲದಿರುವ ಟ್ರ್ಯಾಕ್ಟರ್ ಮತ್ತು ಮರಳು ಸಾಗಾಟ ಮಾಡುತ್ತಿದ್ದ ಶಮಂತ ಹಾಗೂ ರವಿ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

