Breaking News

ಜೂಜಾಡುತ್ತಿದ್ದ 16 ಜನರ ಬಂಧನ

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿರುವ ಪಾರ್ಟಿ ಹಾಲ್‌ನಲ್ಲಿ ಜೂಜಾಡುತ್ತಿದ್ದ 16 ಜನರನ್ನು ಪೊಲೀಸರು ಬಂಧಿಸಿ, ಪಣಕ್ಕಿಟ್ಟಿದ್ದ 48,430 ರೂ. ವಶಕ್ಕೆ ಪಡೆದಿದ್ದಾರೆ. ನರಸೀಪುರದ ಬಸವರಾಜು, ಪರಿಣಾಮಿಪುರದ ಮಲ್ಲಿಕಾರ್ಜುನಸ್ವಾಮಿ, ಬೆಂಗಳೂರಿನ ಮಂಜು, ಜ್ಯೋತಿ ಲಿಂಗಯ್ಯ, ವೆಂಕಟೇಶ, ವೀರಭದ್ರಯ್ಯ, ಯೋಗೇಶ್, ವಿಶಾಲ್, ನಂಜೇಗೌಡ, ಮಂಜು ನಾಥ, ಪ್ರವೀಣ್, ರಂಗಸ್ವಾಮಿ, ಕೃಷ್ಣಮೂರ್ತಿ, ಕಿರಣ್, ಅಶೋಕ್ ಕುಮಾರ್, ಇಬ್ರಾಹಿಂ ಬಂಧಿತರು. ಬಂಧಿತರು ಶಿವನಸಮುದ್ರ ಗ್ರಾಮದ ಶಿಂಷಾ ಮಾರಮ್ಮನ ದೇವಾಲಯಕ್ಕೆ ಆಗಮಿಸಿದ್ದು ಈ ವೇಳೆ ಪಾರ್ಟಿ ಹಾಲ್ವೊಂದರಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಆಟದಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಗ್ರಾಮಾಂತರ ಠಾಣೆ ಪಿಎಸ್‌ಐ ಸುಪ್ರೀತ್, ಎಚ್.ಸಿ ಶಾಂತರಾಜು, ಕಾನ್‌ಸ್ಟೆಬಲ್ ಶಂಕರ್, ರಾಜೇಶ್, ದುಂಡಪ್ಪ ಪೂಜಾರಿ, ದಿನೇಶ್, ಚೌಹಾನ್, ಶೇಖ್‌ಜುನೈದ್, ಶ್ರವಣಕುಮಾರ್ ಇದ್ದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *