ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಮದುವೆ ಸಮಾರಂಭವೊಂದರಲ್ಲಿ ರಸಗುಲ್ಲಾ ತಿಂದ ಎಂಬ ಕಾರಣಕ್ಕಾಗಿ 11 ವರ್ಷದ ಬಾಲಕನನ್ನು ಉರಿಯುವ ತಂದೂರಿ ಒಲೆಗೆ ಎಸೆದಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖದಿಂದ ಸೊಂಟದವರೆಗೆ ಸುಟ್ಟ ಗಾಯಗಳಿಂದ ಮಗು ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮದುವೆಯ ಊಟದ ಕೌಂಟರ್‌ನಲ್ಲಿ ಬಾಲಕ ಪದೇ ಪದೇ ರಸಗುಲ್ಲಾ ತೆಗೆದುಕೊಳ್ಳುತ್ತಿದ್ದನು. ಇದರಿಂದ ಕೋಪಗೊಂಡ ಕ್ಯಾಟರಿಂಗ್ ಕಾಂಟ್ರಾಕ್ಟರ್ ಮೊದಲು ಬಾಲಕನಿಗೆ ಬೆದರಿಕೆ ಹಾಕಿದ್ದಾನೆ. ನಂತರ ಬಾಲಕನನ್ನು ಎತ್ತಿ ಉರಿಯುತ್ತಿದ್ದ ತಂದೂರಿ ಒಲೆಯ ಮೇಲೆ ಕೂರಿಸಲು ಯತ್ನಿಸಿದ್ದಾನೆ. ಈ ವೇಳೆ ಬಾಲಕ ಆಯತಪ್ಪಿ ಒಳೆಯೊಳಗೆ ಬಿದ್ದಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

