Breaking News

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ ಪೊಲೀಸರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸ್ತಗಿರಿ ಮಾಡಿದ್ದಾರೆ. ಬಂಟ್ವಾಳ ತಾಲೂಕಿನ ಪೆರುವಾಯಿ ನಿವಾಸಿ ಅಬ್ಬಾಸ್ ಜಿ ಬಂಧಿತ ಆರೋಪಿ. 2015ರಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಾರಣಾಂತಿಕ ಹಲ್ಲೆ, ಗಲಭೆ ಮತ್ತು ಜೀವ ಬೆದರಿಕೆ ಪ್ರಕರಣದಲ್ಲಿ (ಅ.ಕ್ರ 42/2015) ಅಬ್ಬಾಸ್ ಪ್ರಮುಖ ಆರೋಪಿಯಾಗಿದ್ದನು. ಪ್ರಕರಣದ ಬಳಿಕ ಈತ ವಿದೇಶಕ್ಕೆ ಪರಾರಿಯಾಗಿದ್ದನು. ಈತನ ವಿರುದ್ಧ ನ್ಯಾಯಾಲಯವು ಬರೋಬ್ಬರಿ 35 ಬಾರಿ ವಾರಂಟ್ ಜಾರಿ ಮಾಡಿದ್ದರೂ, ಈತ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಆರೋಪಿ ಅಬ್ಬಾಸ್ ಏಪ್ರಿಲ್ 16ರಂದು ವಿದೇಶದಿಂದ ಮಂಗಳೂರಿಗೆ ಮರಳುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ವಿಟ್ಲ ಪೊಲೀಸರು, ಇಮಿಗ್ರೇಷನ್ ವಿಭಾಗದ ಸಹಕಾರದೊಂದಿಗೆ ವಿಮಾನ ನಿಲ್ದಾಣದಲ್ಲೇ ಹೊಂಚು ಹಾಕಿ ಕುಳಿತಿದ್ದರು. ವಿಟ್ಲ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮೋಹನ, ಸಿಬ್ಬಂದಿಗಳಾದ ವೆಂಕಪ್ಪ ಮತ್ತು ಲೋಕೇಶ್ ಅವರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Share News

About BigTv News

Check Also

ಉ.ಪ್ರದೇಶ: ರಸಗುಲ್ಲಾ ಕೇಳಿದ್ದಕ್ಕೆ ಮಗುವನ್ನೇ ಒಲೆಯೊಳಗೆಸೆದ ವ್ಯಕ್ತಿ

ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಮದುವೆ ಸಮಾರಂಭವೊಂದರಲ್ಲಿ ರಸಗುಲ್ಲಾ ತಿಂದ ಎಂಬ ಕಾರಣಕ್ಕಾಗಿ 11 ವರ್ಷದ ಬಾಲಕನನ್ನು ಉರಿಯುವ ತಂದೂರಿ ಒಲೆಗೆ …

Leave a Reply

Your email address will not be published. Required fields are marked *