Breaking News

40 ಲಕ್ಷ ರೂ. ಮೌಲ್ಯದ ಟ್ರಾನ್ಸ್‌ಫಾರ್ಮರ್ ವೈಂಡಿಂಗ್ ಕಳವು : ಪ್ರಕರಣ ದಾಖಲು

ಕನಕಗಿರಿ: ತಾಲೂಕಿನ ನವಲಿ ಗ್ರಾಮದ ಹೊರವಲಯದಲ್ಲಿರುವ 110/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ದಾಸ್ತಾನು ಮಾಡಿದ್ದ 5 MVA ಸಾಮರ್ಥ್ಯದ ಪವರ್ ಟ್ರಾನ್ಸ್‌ಫಾರ್ಮರ್‌ನ ತಾಮ್ರದ ವೈಂಡಿಂಗ್ ಕಳ್ಳತನವಾಗಿದ್ದು, ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಸುಮಾರು 40.53 ಲಕ್ಷ ರೂ. ಮೌಲ್ಯದ ತಾಮ್ರ ವೈಂಡಿಂಗ್ ಕಳುವಾಗಿರುವುದರಿಂದ ಜೆಸ್ಕಾಂ ಇಲಾಖೆಗೆ ಭಾರೀ ನಷ್ಟ ಉಂಟಾಗಿದೆ. ಜೆಸ್ಕಾಂ ಅಧಿಕಾರಿಗಳ ಪ್ರಕಾರ, ಈ ಟ್ರಾನ್ಸ್‌ಫಾರ್ಮರ್ ಸಂಪೂರ್ಣ ದುರಸ್ತಿಗೆ ಕೋಟಿಗಟ್ಟಲೆ ವೆಚ್ಚವಾಗುವ ಸಾಧ್ಯತೆ ಇದೆ. ತಾಮ್ರದ ಬೆಲೆ ಏರಿಕೆಯಿಂದ ಇಂತಹ ಕಳ್ಳತನಗಳು ಹೆಚ್ಚುತ್ತಿದ್ದು, ಉಪಕೇಂದ್ರಗಳ ಭದ್ರತೆ ಬಲಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಜೆಸ್ಕಾಂನ ಸಣ್ಣ ನೀರಾವರಿ ಹಾಗೂ ನಿರ್ವಹಣೆ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ನಿಸರ್ಗ ಸಿ.ಕೆ. ಭೀಮಪ್ಪ ಅವರು ಈ ಕುರಿತು ದೂರು ನೀಡಿದ್ದಾರೆ. ದೂರುದಾರರ ಮಾಹಿತಿಯಂತೆ, ಮಾರ್ಚ್ ತಿಂಗಳಿಂದ ಏಪ್ರಿಲ್ 18ರವರೆಗೆ ಯಾವುದೋ ಅವಧಿಯಲ್ಲಿ ಕಿಡಿಗೇಡಿಗಳು ಉಪಕೇಂದ್ರದ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ, ಟ್ರಾನ್ಸ್‌ಫಾರ್ಮರ್‌ನ ತಾಮ್ರ ವೈಂಡಿಂಗ್ ಬಿಚ್ಚಿ ಕಳವು ಮಾಡಿಕೊಂಡು ಹೋಗಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *