ಜೂ. 30 ರಂದು ಕರ್ನಾಟಕ ವೈಭವ ನೃತ್ಯ ರೂಪಕ ಪ್ರದರ್ಶನ.

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ಸಹಯೋಗದಲ್ಲಿ ಭರತನಾಟ್ಯ ಕಲಾವಿದೆ ಸಹನಾ ಭಟ್ ಅವರ ಕರ್ನಾಟಕ ವೈಭವ ನೃತ್ಯ ರೂಪಕ ಕಾರ್ಯಕ್ರಮವನ್ನು ಇದೇ ಜೂ. 30 ರಂದು ಸಂಜೆ 5.30 ಕ್ಕೆ ಇಲ್ಲಿನ ವಿದ್ಯಾನಗರದ ಶಿವಂಮದಿರದಲ್ಲಿ ಆಯೋಜಿಸಲಾಗಿದೆ ಎಂದು ಭರತನಾಟ್ಯ ಕಲಾವಿದೆ ಡಾ. ಸಹನಾ ಭಟ್ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನೃತ್ಯ ರೂಪಕ ಕಾರ್ಯಕ್ರಮವನ್ನು ನ್ಯಾಯವಾದಿ ಪಿ.ಪಿ. ಹಿರೇಮಠ ಅವರು ಉದ್ಘಾಟಿಸಲಿದ್ದಾರೆ. ವಿಧೂಷಿ ನಿರುಪಮಾ ಕುಲಕರ್ಣಿ ಹಾಗೂ ತಂಡದವರು ರೂಪಕವನ್ನು ಪ್ರಸ್ತುತಪಡಿಸಲಿದ್ದಾರೆ. ಸುಮಾರು 25 ಕಲಾವಿದರು ಭಾಗವಹಿಸಲಿದ್ದು, ಒಂದು ಗಂಟೆಯ ಕಾಲ ರೂಪಕ‌ ಪ್ರದರ್ಶನ ನಡೆಯಲಿದೆ ಎಂದರು.ಈ ನೃತ್ಯ ರೂಪಕದಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸ, ಗತವೈಭವ, ವಚನ ಸಾಹಿತ್ಯದ ಉಗಮದ ಕುರಿತು ನಿರುಪಮಾ ಕುಲಕರ್ಣಿ ಸೇರಿದಂತೆ 25 ಕಲಾವಿದರು ನೃತ್ಯದ ಮೂಲಕ ಜನತೆಗೆ ಪ್ರಸ್ತುತಪಡಿಸಲಿದ್ದಾರೆ.ನೃತ್ಯ ರೂಪಕಕ್ಕೆ ಶಿರಸಿಯ ಪ್ರಕಾಶ ಭಾಗವತ ಸಂಗೀತ ಸಂಯೋಜನೆ ಹಾಗೂ ಡಾ. ಸಹನಾ ಭಟ್ ಅವರ ಮಾರ್ಗದರ್ಶನವಿದೆ‌.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಸವ ಕೇಂದ್ರದ ಉಪಾಧ್ಯಕ್ಷರಾದ ಎಸ್.ವಿ. ಪಟ್ಟಣಶೆಟ್ಟಿ, ಬರಹಗಾರರಾದ ಲತಾ ಹೆಗಡೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಭಟ್, ನಿರುಪಮಾ ಕುಲಕರ್ಣಿ ಇದ್ದರು.

Share News

About admin

Check Also

ನಿಯಂತ್ರಣ ತಪ್ಪಿದ ಚಾಲಕ : ವಿದ್ಯಾರ್ಥಿಗೆ ಗಂಭೀರ ಗಾಯ

ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ವೃತ್ತಕ್ಕೆ ಡಿಕ್ಕಿಯಾಗಿ ಧಾರವಾಡ ಎಸ್​ಡಿಎಂ ಎಂಬಿಬಿಎಸ್ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿ ಗಂಭೀರ …

Leave a Reply

Your email address will not be published. Required fields are marked *

You cannot copy content of this page