ಅಪಘಾತ ವಾಹನ ಬಿಡುಗಡೆಗೆ ಲಂಚ: ಹೆಡ್ ಕಾನ್ ಸ್ಟೇಬಲ್ ನಾಗೇಶ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ!
₹25 ಸಾವಿರ ಬೇಡಿಕೆ, ₹13 ಸಾವಿರ ಸ್ವೀಕಾರ: ಲಂಚದ ವೇಳೆ ಸಿಕ್ಕಿಬಿದ್ದ ಟ್ರಾಫಿಕ್ ಪೊಲೀಸ್..
ಯಾದಗಿರಿ ಜಿಲ್ಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರು ಮತ್ತೊಮ್ಮೆ ಸಿಡಿಲಿನಂತೆ ಬಡಿದಿದ್ದು, ಅಪಘಾತಕ್ಕೀಡಾದ ವಾಹನ ಬಿಡುಗಡೆಗೆ ಲಂಚದ ಜಾಲ ಹಬ್ಬಿಸಿದ್ದ ಹೆಡ್ ಕಾನ್ ಸ್ಟೇಬಲ್ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾನೆ…
ಯಾದಗಿರಿ ನಗರ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ನಾಗೇಶ್, ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಪಘಾತಕ್ಕೀಡಾದ ವಾಹನ ಬಿಡುಗಡೆ ಮಾಡಲು ಮೊದಲು ₹25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಬಳಿಕ ಮಾತುಕತೆಯಲ್ಲಿ ₹13 ಸಾವಿರಕ್ಕೆ ಇಳಿದು, ಬಲವಂತವಾಗಿ ಹಣ ವಸೂಲಿಗೆ ಮುಂದಾಗಿದ್ದಾನೆ ಎನ್ನಲಾಗಿದೆ..
ಈ ದೌರ್ಜನ್ಯದಿಂದ ಬೇಸತ್ತ ಮುದ್ನಾಳ ತಾಂಡಾದ ಅನ್ಯಾ ರಾಥೋಡ್ ಅವರು ಲೋಕಾಯುಕ್ತರ ದ್ವಾರ ತಟ್ಟಿದ ಹಿನ್ನೆಲೆ, ಅಧಿಕಾರಿಗಳು ಕುಶಲತೆಯಿಂದ ಟ್ರ್ಯಾಪ್ ಪ್ಲಾನ್ ಮಾಡಿದರು. ಅಂತಿಮವಾಗಿ ನಾಗೇಶ್ ಲಂಚದ ಹಣ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಬಂಧಿಸಲಾಯಿತು…
ಲೋಕಾಯುಕ್ತ ಡಿವೈಎಸ್ಪಿ ಜಾಕೀರ್ ಇನಾಮದಾರ್ ನೇತೃತ್ವದಲ್ಲಿ ನಡೆದ ಈ ದಾಳಿ, ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆಯ ಸಂದೇಶವಾಗಿದೆ. ಜನರ ಸಮಸ್ಯೆಗಳನ್ನು ಪರಿಹರಿಸಬೇಕಾದವರೇ ಲಂಚದ ದಂಧೆಯಲ್ಲಿ ತೊಡಗಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ…
ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ವಿವರಗಳು ಹೊರಬರುವ ಸಾಧ್ಯತೆ ಇದೆ. ಲೋಕಾಯುಕ್ತರ ಈ ಕಾರ್ಯಾಚರಣೆ, “ಭ್ರಷ್ಟರಿಗೆ ಬಿಡುವಿಲ್ಲ” ಎಂಬ ಸಂದೇಶವನ್ನು ಮತ್ತೆ ಸ್ಪಷ್ಟಪಡಿಸಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

