Breaking News

ಪೋಕ್ಸೋ ಅಡಿ ದೇಶದಲ್ಲೇ ಮೊದಲ ಬಾರಿ ಗಲ್ಲು ಶಿಕ್ಷೆ!

ಚನ್ನೈ: ಅಪ್ರಾಪ್ತ ವಯಸ್ಸಿನ್ನ 5 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯೊಬ್ಬನಿಗೆ ತಮಿಳುನಾಡಿನ ಕೋರ್ಟೊಂದು ಗಲ್ಲು ಶಿಕ್ಷೆ ವಿಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಗಲ್ಲು ಶಿಕ್ಷೆ ವಿಧಿಸುತ್ತಿರುವ ದೇಶದ ಮೊದಲ ಪ್ರಕರಣ ಇದಾಗಿದೆ. ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಪೋಕ್ಸೋ ವಿಶೇಷ ಕೋರ್ಟ್‌ ಈ ತೀರ್ಪು ನೀಡಿದ್ದು, ಇದು ಅಪರೂಪದಲ್ಲಿ ಅಪರೂಪದ ಅಪರಾಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಐದೂ ಹೆಣ್ಣುಮಕ್ಕಳು ಸುಮಾರು 10 ವರ್ಷದವರು ಎಂದು ತಿಳಿದುಬಂದಿದ್ದು, ಶಿಕ್ಷೆಗೊಳಗಾದ ವ್ಯಕ್ತಿಯನ್ನು 45 ವರ್ಷದ ಮರಗೆಲಸಗಾರ ಚಂದ್ರನ್‌ ಎಂದು ಗುರುತಿಸಲಾಗಿದೆ. ಗಲ್ಲು ಶಿಕ್ಷೆ ಜತೆಗೆ ಚಂದ್ರನ್‌ಗೆ 11,000 ರೂ. ದಂಡವನ್ನೂ ವಿಧಿಸಿದೆ. ಜತೆಗೆ ಸಂತ್ರಸ್ತ ಮಕ್ಕಳಿಗೆ ತಲಾ 7 ಲಕ್ಷ ರೂ. ನೀಡುವಂತೆ ರಾಜ್ಯ ಸರ್ಕಾರಕ್ಕೂ ಸೂಚಿಸಿದೆ. 2024ರ ಫೆ.4ರ ಸಮಯದಲ್ಲಿ ಒಂದು ವಾರದವರೆಗೆ ಚಂದ್ರನ್‌ ದೌರ್ಜನ್ಯವೆಸಗಿದ್ದ. ಹೆಂಡತಿಯಿಲ್ಲದ ವೇಳೆ ಚಂದ್ರನ್‌ ಮನೆ ಬಳಿ ಆಟವಾಡುತ್ತಿದ್ದ ಮಕ್ಕಳಿಗೆ ತಿಂಡಿ ಕೊಡುವ ಆಮಿಷವೊಡ್ಡಿ ಮನೆಗೆ ಕರೆದೊಯ್ದು, ಅಶ್ಲೀಲ ವಿಡಿಯೋಗಳನ್ನು ತೋರಿಸಿ, ದೌರ್ಜನ್ಯವೆಸಗಿದ್ದ ಎಂದು ತಿಳಿದುಬಂದಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *