ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪತ್ರಕರ್ತರ ಸಂಘ ಹುಬ್ಬಳ್ಳಿಯ ನೂತನವಾಗಿ ಚುನಾಯಿತರಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇಂದು ನಗರದ ಸ್ವರ್ಣಭವನದಲ್ಲಿ ಹಮ್ಮಿಕೊಳ್ಳಲಾಯಿತು.ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂಜೆದರ್ಪಣ ಪತ್ರಿಕೆಯ ಗಣಪತಿ ಗಂಗೊಳ್ಳಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಜಯವಾಣಿ ಪತ್ರಿಕೆಯ ಜಗದೀಶ ಬುರ್ಲಬಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸುಶೀಲೇಂದ್ರ ಕುಂದರಗಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಬಸವರಾಜ ಬಿಜಾಪುರ, ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಡಾ.ವಿರೇಶ ಹಂಡಗಿ, ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾದ ಗುರು ಭಾಂಡಗೆ, ಜಿಲ್ಲಾ ಕಾರ್ಯಕಾರ್ಯಣಿ ಸದಸ್ಯ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಮಂಜುನಾಥ ಜರತಾರಘರ, ತನುಜಾ ನಾಯಕ, ಹೇಮಂತ ದೊಡ್ಡಮನಿ, ಗುರುರಾಜ ಹೂಗಾರ, ಪ್ರಕಾಶ ಶೇಟ್, ಬಸವರಾಜ ಹೂಗಾರ, ಪ್ರಕಾಶ ನೂಲ್ವಿ, ಅಶೋಕ ಘೋರ್ಪಡೆ, ಶಿವಶಂಕರ ಕಂಠಿ, ಸ್ಯಾಮುಯೆಲ್ ಪಟ್ಟಿ, ಶಿವಾಜಿ ಲಾತೂರಕರ, ಅಕ್ಬರ ಬೆಳಗಾಂವಕರ, ಗುರುರಾಜ ಸಿ.ಹೂಗಾರ, ಕೃಷ್ಣಾ ದಿವಾಕರ ಅವರಿಗೆ ಚುನಾವಣಾಧಿಕಾರಿ ಎಂ.ಎಂ.ಪಾಟೀಲ ಅವರು ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡುವ ಮೂಲಕ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಚುನಾವಣಾಧಿಕಾರಿಗಳಾದ ಎಂ.ಎಂ.ಪಾಟೀಲ, ಮಯಾಚಾರ್ಯ್, ಪುಂಡಲೀಕ ಬಾಳೋಜಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಸದಸ್ಯರು ಪಾಲ್ಗೊಂಡು ನೂತನವಾಗಿ ಅಧಿಕಾರ ಸ್ವೀಕರಿಸಿದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





