ಲಿಂಗಸುಗೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿದ್ದ ಮಟ್ಕಾ ಹಾಗೂ ಇಸ್ಪೀಟು ಅಡ್ಡೆ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ತಾಲ್ಲೂಕಿನ ಈಚನಾಳ ಕ್ರಾಸ್ ಬಳಿ ಮಟ್ಕಾ ಸಂಖ್ಯೆ ಬರೆಯುತ್ತಿದ್ದ ಈಚನಾಳ ಗ್ರಾಮದ ಪೀರಸಾಬ ಇಮಾಮಸಾಬ ವಶಕ್ಕೆ ಪಡೆದುಕೊಂಡು ಆತನ ಬಳಿಯಿದ್ದ ₹ 750 ಜಪ್ತಿ ಮಾಡಲಾಗಿದೆ. ತಾಲ್ಲೂಕಿನ ಯಲಗಲದಿನ್ನಿ ಹಳ್ಳದ ಬಳಿ ಇಸ್ಟೀಟು ಜೂಜಾಟದ ಅಡ್ಡೆ ಮೇಲೆ ಪಿಐ ಹೊಸಕೇರಪ್ಪ ದಾಳಿ ನಡೆಸಿ ₹ 2,500 ಜಪ್ತಿ ಮಾಡಿ ಜೂಜಾಟ ಆಡುತ್ತಿದ್ದ ವಿಶ್ವನಾಥ, ಶರಣಗೌಡ, ಬಸಪ್ಪ, ರಾಮನಗೌಡ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

