ನವದೆಹಲಿ: 2008ರ ಅಸ್ಸಾಂ ಸರಣಿ ಸ್ಫೋಟ ಪ್ರಕರಣ ಸಂಬಂಧ ನ್ಯಾಷನಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಬೊಡೋಲ್ಯಾಂಡ್ (ಎನ್ಡಿಎಫ್ಬಿ) ಸಂಸ್ಥಾಪಕ ರಂಜನ್ ದೈಮರಿ ಸೇರಿದಂತೆ 10 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ, ಕೇಸ್ನ ಇತರೆ ಮೂವರು ಆರೋಪಿಗಳಾದ ಪ್ರಭಾತ್ ಬೊಡೊ, ಜಯಂತಿ ಬಸುಮತರಿ ಮತ್ತು ಮಥುರಾ ಬ್ರಹ್ಮ ಅವರಿಗೆ ದಂಡ ವಿಧಿಸಿ ಕೇಸ್ನಿಂದ ಖುಲಾಸೆಗೊಳಿಸಿದೆ.ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಪರೇಶ್ ಚಕ್ರವರ್ತಿ, ರಂಜನ್ ದೈಮರಿ ಜೊತೆಗೆ ಜಾರ್ಜ್ ಬೊಡೊ, ಬಿ.ತರೈ, ರಾಜು ಸರ್ಕಾರ್, ಅಂಚೈ ಬೊಡೊ, ಇಂದ್ರ ಬ್ರಹ್ಮ, ಲೊಕೊ ಬಾಸುಮತರಿ, ಖರ್ಗೇಶ್ವರ ಬಸುಮತಲಿ, ಅಜಯ್ ಬಸುಮತರಿ ಮತ್ತು ರಾಜೇನ್ ಗೊಯರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2008ರ ಅಕ್ಟೋಬರ್ 30ರಂದು ಅಸ್ಸಾಂನ 4 ಜಿಲ್ಲೆಗಳಲ್ಲಿ 11 ಕಡೆ ಸರಣಿ ಬಾಂಬ್ಗಳನ್ನ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ 88 ಜನರು ಸಾವನ್ನಪ್ಪಿ, 548 ಜನರು ಗಾಯಗೊಂಡಿದ್ದರು. ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಈ ಕೇಸ್ನ ಪ್ರಮುಖ ಆರೋಪಿಯಾಗಿದ್ದ ರಂಜನ್ ದೈಮರಿಯನ್ನು ಬಾಂಗ್ಲಾದೇಶದಲ್ಲಿ ಬಂಧಿಸಿ, ನಂತರ 2010ರಲ್ಲಿ ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು. 2013ರಲ್ಲಿ ಜಾಮೀನಿನ ಮೂಲಕ ದೈಮರಿ ಹೊರಬಂದಿದ್ದರು
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





