Breaking News

ರಾಯಚೂರಲ್ಲಿ ಬೆಂಕಿಯ ಕಿಡಿ ತಗುಲಿ ಹೊತ್ತಿ ಉರಿದ ಶೆಡ್ : 3 ಲಕ್ಷ ಮೌಲ್ಯದ 20 ಕೋಳಿ, 10 ಮೇಕೆ ಸಜೀವ ದಹನ!

ರಾಯಚೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಪಕ್ಕದ ಜಮೀನಿನಿಂದ ಬೆಂಕಿ ಕಿಡ್ಡಿ ತಗುಲಿ ಕುರಿ ಶೆಡ್ ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ 20 ಕೋಳಿಗಳು, 10 ಮೇಕೆ ಸಜೀವ ದಹನಗೊಂಡಿದ್ದು, ಮನೆಗೂ ಹಾನಿಯಾಗಿದೆ ರಾಯಚೂರು ತಾಲೂಕಿನ ಬುರ್ದಿಪಾಡ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ನಾಗಮ್ಮ ಎಂಬುವರಿಗೆ ಈ ಒಂದು ಕುರಿ ಶೆಡ್ ಹಾಗೂ ಮನೆ ಸೇರಿತ್ತು. ನಾಗಮ್ಮಳ ಪಕ್ಕದ ಹೊಲದಲ್ಲಿ ಕಸಕ್ಕೆ ಬೆಂಕಿ ಹಾಕಲಾಗಿತ್ತು. ಈ ವೇಳೆ ಬೆಂಕಿ ಕಿಡಿ ತಾಗಿ ಶೆಡ್ ಹಾಗೂ ಮನೆ ಹೊತ್ತಿ ಉರಿದಿದೆ. 3 ಲಕ್ಷ ಮೌಲ್ಯದ 20 ಕೋಳಿಗಳು, ಹಾಗೂ 10 ಮೇಕೆಗಳು ಸಜೀವ ದಹನಗೊಂಡಿವೆ. ಹತ್ತಿ ಮಾರಾಟದಿಂದ ಬಂದಿದ್ದ 2 ಲಕ್ಷ ನಗದು ಸಹ ಸುಟ್ಟು ಬಸ್ಮವಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *