ಕುಂದಾಪುರ: ವರದಕ್ಷಿಣೆ ಬೇಡಿಕೆ ಹಿನ್ನೆಲೆಯಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಜೀವ ಬೆದರಿಕೆ ಹಾಕಿರುವುದಾಗಿ ಪತಿ ಜುನೈದ್, ಹಸೈನಾರ್, ಅಲೀಮಾಬಿ, ಸಲೀಂ, ಉಮೈಮಾ ಹಾಗೂ ರಶ್ಮೀಲಾ ವಿರುದ್ಧ ಗೋಪಾಡಿಯ ತಸ್ಮಾ (25) ದೂರು ನೀಡಿದ್ದಾರೆ. 2022ರಲ್ಲಿ ಸಾಗರದ ಆವಿನ ಹಳ್ಳಿಯ ಜುನೈದ್ ಅವರನ್ನು ವಿವಾಹವಾಗಿದ್ದು, ಮದುವೆ ವೇಳೆ 2 ಲಕ್ಷ ರೂ.ನಗದು ಹಾಗೂ 50 ಪವನ್ ಚಿನ್ನ ನೀಡಲಾಗಿದೆ. ಬಳಿಕ ಹೆಚ್ಚುವರಿ ಹಣ ಮತ್ತು ಚಿನ್ನಕ್ಕಾಗಿ ಪತಿ ಸೇರಿದಂತೆ ಮನೆಯವರು ಹಿಂಸೆ ನೀಡುತ್ತಿದ್ದು, ಪತಿಯು ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಪೆಟ್ರೋಲ್ ಬಂಕ್ ನಿರ್ಮಾಣಕ್ಕಾಗಿ 10 ಲಕ್ಷ ರೂ. ತರಲು ಒತ್ತಾಯಿಸಿದ್ದು, ನಿರಾಕರಿಸಿದಾಗ ಹಲ್ಲೆ ನಡೆಸಿ, ತಲಾಖ್ ನೀಡುತ್ತೇವೆ, ಮಾತ್ರವಲ್ಲದೆ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರಿದ್ದಾರೆ. ಈ ಸಂಬಂಧ 6 ಮಂದಿ ವಿರುದ್ಧ ಕುಂದಾಪುರದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

