Breaking News

*”ಆಯಂಟಿ ಸ್ಟಾಬಿಂಗ್ ಸ್ಕ್ವಾಡ್” ವಿಶೇಷ ಕಾರ್ಯಾಚರಣೆ: ಆಯುಧ ಸಮೇತ ಆರೋಪಿ ವಶಕ್ಕೆ*

ಬೆಳಗಾವಿ ನಗರದಲ್ಲಿ ಇತ್ತಿಚೆಗೆ ಹೆಚ್ಚುತ್ತಿರುವ ಸ್ಟಾಬಿಂಗ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಬೆಳಗಾವಿ ನಗರದ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ “ಆಯಂಟಿ ಸ್ಟಾಬಿಂಗ್ ಸ್ಕ್ವಾಡ್” ತಂಡದಿಂದ ಪರಿಶೀಲನೆ ಮುಂದುವರೆಸಲಾಗಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಂಡಿ-ಬುಡ್ಯಾನೂರ ರಸ್ತೆಯಲ್ಲಿ ಆರೋಪಿತನಾದ ಕಿರಣ ದುರ್ಗಪ್ಪ ಕಡ್ಯಾಗೋಳ (22) ಎಂಬಾಗ ಕಾನೂನು ಬಾಹಿರವಾಗಿ ಅರಣ್ಯ ಪ್ರದೇಶದ ಗಿಡಗಂಟಿಗಳಲ್ಲಿ ನಿಂತು ಕೈಯಲ್ಲಿ ಕಬ್ಬಿಣದ ಕುಡುಗೋಲ ಹಿಡಿದು ಜಳಪಳಿಸುತ್ತಿದ್ದ. ಈ ವೇಳೆ ಮಾರಿಹಾಳ ಠಾಣೆಯ ಪಿಎಸ್‌ಐ ಮಂಜುನಾಥ ಹುಲಕುಂದ ಪಿಎಸ್‌ಐ ಹಾಗೂ ಸಿಬ್ಬಂದಿಯವರು ಆರೋಪಿಯನ್ನು ಕುಡುಗೋಲ ಸಮೇತ ವಶಕ್ಕೆ ಪಡೆದಿದ್ದು, ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಲಾಗಿದೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *