Breaking News

ಮಾಗಂಲ್ಯ ಸರ ಕದ್ದವರ ಬಂಧನ

ಹಾರೋಹಳ್ಳಿ: ಚಿನ್ನದ ಮಾಂಗಲ್ಯ ಕಿತ್ತು ಪರಾರಿಯಾಗಿದ್ದ ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆನೇಕಲ್​ ತಾಲೂಕಿನ ತಿಮ್ಮರಾಯಸ್ವಾಮಿ ದಿಣ್ಣೆ ಕುವೆಂಪುನಗರದ ಆಟೋ ಚಾಲಕ ಲೋಕೇಶ (41), ಮಟ್ಟನಹಳ್ಳಿ ಲಾರಿ ಚಾಲಕ ರಮೇಶ್​ ವಿ. ಬಿನ್​ ಲೇಟ್​ ವೆಂಕಟರಮಣಪ್ಪ (43) ಬಂಧಿತರು. ಆನೇಕಲ್​&ಹಾರೋಹಳ್ಳಿ ಮುಖ್ಯರಸ್ತೆಯ ನರಿಪುರಗೇಟ್​ ಬಳಿ ಸೋಮವಾರ ಸಂಜೆ ಲ್ಮಮ್ಮ ಎಂಬುವವರು ನೀರು ತೆಗೆದುಕೊಳ್ಳಲು ಬಂದಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಈ ಇಬ್ಬರು ಲಕ್ಷ್ಮಮ್ಮ ಅವರನ್ನು ಅಡ್ಡಗಟ್ಟಿ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಲಕ್ಷ್ಮಮ್ಮ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಹಾರೋಹಳ್ಳಿ ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ 26ಗ್ರಾಂನ ಚಿನ್ನದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್​ ವಶಪಡಿಸಿಕೊಂಡಿದ್ದಾರೆ. ಈ ಬೈಕ್​ ಸಹ ಕಳ್ಳತನ ಮಾಡಿದ್ದು ಎಂದು ಖದೀಮರು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಪೊಲೀಸ್​ ಉಪಅಧೀಕ ಶ್ರೀನಿವಾಸ್​ ಬಿ.ಎಂ. ನೇತೃತ್ವದಲ್ಲಿ ಇನ್​ಸ್ಪೆಕ್ಟರ್​ ಮಲ್ಲೆಶ್​, ಪಿಎಸ್​ಐ ಪ್ರಜ್ವಲ್​, ಎಎಸ್​ಐ ಆಯುಬ್​ ಪಾಷಾ, ಸಿಬ್ಬಂದಿ ಅನಂತ್​ ಕುಮಾರ್​, ಎಲ್​.ಬೋರೇಗೌಡ, ಶಂಕರಲಿಂಗ ಎಸ್​. ಕುಂಬಾರ್​, ಶರಣಬಸವ, ಕೃಷ್ಣಮೂರ್ತಿ, ವಿರೂಪಾಪ್ಪ, ಫೈರೋಜ್​ ಪಾಷ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *