ಮಾಗಡಿ: ಪಟ್ಟಣದ ಸೋಮೇಶ್ವರ ದೇವಾಲಯ ಬಳಿಯ ಖಾಸಗಿ ವುಡ್ ಇಂಡಸ್ಟ್ರೀಸ್ ಘಟಕದ ಪ್ರ್ರೊಡಕ್ಷನ್ ಸೆಕ್ಷನ್ನ ಸಾ&ಡಸ್ಟ್ ಸ್ಫೋಟಗೊಂಡು ಗಾಯಗೊಂಡಿದ್ದ ಇಬ್ಬರು ಕಾರ್ಮಿಕರು ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾರೆ. ಅಸ್ಸಾಂ ಮೂಲದ ಕುಲಮಣಿ ಮಲ್ಲಿಕ್ (47) ಹಾಗೂ ಕೈಲಾಸ್ ಮಲ್ಲಿಕ್(45) ಮೃತರು. ಮೇ 6ರಂದು ಸಂಭವಿಸಿದ ಬೆಂಕಿ ದುರಂತದಲ್ಲಿ ತೀವ್ರ ಗಾಯಗೊಂಡಿದ್ದ ಇಬ್ಬರು ಕಾರ್ಮಿಕರಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರಸುಟ್ಟ ಗಾಯಗಳಾಗಿದ್ದ ಕುಲಮಣಿ ಮಲ್ಲಿಕ್ ಆಸ್ಪತ್ರೆಗೆ ದಾಖಲಾದ ಎರಡು ದಿನದ ಬಳಿಕ ಮೃತಪಟ್ಟಿದ್ದರೆ, ಕೈಲಾಸ್ ಮಲ್ಲಿಕ್ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಇಬ್ಬರ ಮೃತದೇಹಗಳನ್ನು ವಿಮಾನದಲ್ಲಿ ಅಸ್ಸಾಂನ ಕೇಂದ್ರಪಡ ಗ್ರಾಮಕ್ಕೆ ರವಾನಿಸಲಾಗಿದೆ. ಮೃತ ಕಾರ್ಮಿಕರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಮಾಗಡಿ ಪೊಲೀಸರು ಇಂಡಸ್ಟ್ರೀಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

