ಉಳ್ಳಾಲ: ತಾಲ್ಲೂಕಿನ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಮೇಲ್ಸೇತುವೆ ಕೆಳಗೆ ಮಹೀಂದ್ರ ಪಿಕ್ ಆಪ್ ವಾಹನದಲ್ಲಿ ಪರವಾನಗಿ ಇಲ್ಲದೆಯೇ ಸಾಗಿಸುತ್ತಿದ್ದ ಮರಳನ್ನು ಉಳ್ಳಾಲ ಠಾಣೆಯ ಪೊಲಿಸರು ಮಂಗಳವಾರ ವಶಕ್ಕೆ ಪಡೆದಿದ್ದು, ಈ ಸಂಬಂಧ ಸೋಮೇಶ್ವರ ಗ್ರಾಮದ ಕುಂಪಲ ನಿವಾಸಿ ಅಶ್ವಿತ್ ರಾವ್ (37 ವರ್ಷ) ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮರಳು ಅಕ್ರಮ ಸಾಗಣೆಗೆ ಬಳಸಿದ ಪಿಕಪ್ ವಾಹನ ಹಾಗೂ ಅದರಲ್ಲಿದ್ದ ಮರಳು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿದ ಸ್ವತ್ತುಗಳ ಅಂದಾಜು ಮೌಲ್ಯ (ಪಿಕಪ್ ವಾಹನ ₹4 ಲಕ್ಷ ಹಾಗೂ ಮರಳು ₹6 ಸಾವಿರ) ₹4.06 ಲಕ್ಷ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

