Breaking News

ಆನ್‌ಲೈನ್‌ನಲ್ಲಿ ಮಹಿಳೆಗೆ ₹9 ಲಕ್ಷ ವಂಚನೆ

ಉಡುಪಿ: ಆನ್‌ಲೈನ್‌ನಲ್ಲಿ ಬ್ಯಾಗ್‌ ಖರೀದಿಸಿದ ಮಹಿಳೆಗೆ ಹಣ ವಂಚನೆ ಮಾಡಿರುವ ಕುರಿತು ಸೈಬರ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತೆಕಟ್ಟೆಯ ಸನೀನಾ ಬಾನು ಎಂಬುವವರು ಇನ್‌ಸ್ಟಾಗ್ರಾಂನಲ್ಲಿ ಹ್ಯಾಂಡ್‌ ಬ್ಯಾಗ್‌ ಖರೀದಿ ಮಾಡಿದ್ದು, ಗೂಗಲ್‌ ಪೇ ಮುಖಾಂತರ ಹಣ ಪಾವತಿ ಮಾಡಿದ್ದರು. ಬಳಿಕ ಬೇರೆ ಬೇರೆ ಕಾರಣಗಳನ್ನು ನೀಡಿ, ಸನೀನಾ ಬಾನು ಅವರು ವರ್ಗಾವಣೆ ಮಾಡಿದ ಹಣವನ್ನು ಮರಳಿಸುವುದಾಗಿ ತಿಳಿಸಿ ಹಂತ ಹಂತವಾಗಿ ಒಟ್ಟು ₹ 9 ಲಕ್ಷ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Share News

About BigTv News

Check Also

ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಾಣ ಪ್ರಶ್ನಿಸಿದ್ದಕ್ಕೆ ಹಲ್ಲೆ-

ಬೆಂಗಳೂರು ಉತ್ತರ ತಾಲೂಕಿನ ಕಾಡಸೊಣ್ಣಪನಹಳ್ಳಿ ಗ್ರಾಮದಲ್ಲಿ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದನ್ನು ಪ್ರಶ್ನಿಸಿದ ಕುಟುಂಬದವರ ಮೇಲೆ ಗುಂಪೊಂದು …

Leave a Reply

Your email address will not be published. Required fields are marked *