ಕುಂದಗೋಳ : 2023 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ನಾಯಕರು ಈ ಬಾರಿಯೂ ನನಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕೊಡುತ್ತಾರೆ ಎಂದು ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ ಹೇಳಿದ್ದಾರೆ .
ವೈಯಕ್ತಿಕ ಕಾರಣಗಳಿಂದಾಗಿ ಕೆಲ ದಿನಗಳಿಂದ ಸಭೆ – ಸಮಾರಂಭಗಳಲ್ಲಿ ಭಾಗಿಯಾಗದ ಹಿನ್ನೆಲೆಯಲ್ಲಿ , ನನ್ನ ರಾಜಕೀಯ ಏಳಿಗೆ ಸಹಿಸದ ಕೆಲವರು ಚಿಕ್ಕನಗೌಡ್ರ ರಾಜಕೀಯ ನಿವೃತ್ತಿಯಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಅದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ . ನಾನು ಶಾಸಕನಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕೆಲಸ , ಮತದಾರರ ಬೆಂಬಲದಿಂದಾಗಿ ಕಳೆದೆರಡು ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋತಿದ್ದು , ಈ ಬಾರಿ ಕ್ಷೇತ್ರದ ಮತದಾರ ಆಶಿರ್ವಾದದಿಂದ ಮತ್ತೊಮ್ಮೆಶಾಸಕನಾಗಿ ಆಯ್ಕೆಯಾಗಿ ತಮ್ಮೆಲ್ಲರ ಸೇವೆಯಲ್ಲಿ ನಿರತನಾಗಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

