Breaking News

ಕಡಂದಲೆ ಕ್ಯಾಂಟೀನ್‌ನಲ್ಲಿ ಸ್ಥಳೀಯರಿಗೆ ವಂಚನೆ

ಮೂಡುಬಿದಿರೆ: ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ವ್ಯಾಪ್ತಿಯ ಕೆಪಿಟಿಸಿಎಲ್‌ನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತ ಮೂಲದ ಕೆಲವು ಕಾರ್ಮಿಕರು ಸ್ಥಳೀಯ ಕ್ಯಾಂಟೀನ್, ಅಂಗಡಿ ಮಾಲೀಕರು, ಇತರ ಸಾರ್ವಜನಿಕರಿಗೆ ಹಣ ಪಾವತಿಯ ಡಿಜಿಟಲ್ ಸ್ಕ್ಯಾನ್ ನೆಪದಲ್ಲಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಹಣ ನೀಡುವ ಸಂದರ್ಭ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಲಾಗಿದೆ ಎಂದು ಸುಳ್ಳು ಹೇಳಿ ಹಣ ವರ್ಗಾಯಿಸದೆ ವಂಚನೆ ಎಸಗಲಾಗುತ್ತಿತ್ತು. ಈ ಕೃತ್ಯ ಪೂಪಾಡಿಕಲ್ಲಿನ ಕ್ಯಾಂಟೀನ್ ಒಂದರಲ್ಲಿ ಬೆಳಕಿಗೆ ಬಂದಿದೆ. ಕ್ಯಾಂಟೀನ್ ಮಾಲೀಕರು, ಸ್ಥಳೀಯರು ಮೋಸ ಮಾಡಿದವರನ್ನು ಹಿಡಿದು ಹಣ ವಸೂಲಿ ಮಾಡಿದ್ದಾರೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *