ಬೆಳಗಾವಿ: ಷೇರು ಮಾರುಕಟ್ಟೆಯಲ್ಲಿ ಆನ್‌ಲೈನ್ ಮೂಲಕ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ವಾಟ್ಸಾಪ್ ಗ್ರೂಪ್‌ಗೆ ಸೇರಿಸಿಕೊಂಡು ಹೂಡಿಕೆ ಮಾಡಿಸಿ 19.50 ಲಕ್ಷ ರೂ. ವಂಚನೆ ಮಾಡಿದ ಬಗ್ಗೆ ನಗರ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಮುತಗಾದ ಭೂಷಣ ಪಾಟೀಲ ದೂರು ನೀಡಿದ್ದಾರೆ.ನನ್ನ ವಾಟ್ಸಾಪ್ ಸಂಖ್ಯೆಯನ್ನು ‘ಡಿ85 ಅಷ್ಟಾ ಟ್ರೇಡ್ ಮಾರ್ಕೆಟ್ ಥಿಂಕಿಂಗ್ ಅಲಾಯನ್ಸ್’ ಹೆಸರಿನ ವಾಟ್ಸಾಪ್ ಗ್ರೂಪ್‌ಗೆ ಸೇರಿಸಿಕೊಂಡಿದ್ದರು. ಇದರ ಮೂಲಕ ಆಮಿಷ ತೋರಿಸಿ, 2025ರ ಅಕ್ಟೋಬರ್ ತಿಂಗಳಿನಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡಿದ್ದರು. ಬಳಿಕ ಹೂಡಿಕೆ ಮಾಡಿದ ಹಣ ಹಾಗೂ ಲಾಭದ ಮೊತ್ತ ತೋರಿಸಿದ್ದರು. ಆದರೆ, ಅಲ್ಲಿಂದ ಈವರೆಗೆ ಹೂಡಿಕೆಯ ಹಣ, ಲಾಭದ ಮೊತ್ತ ಮರಳಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ನಮೂದಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

