ಸಂಕೇಶ್ವರ ಪೋಲಿಸರು ನಡೆಸಿದ ಕಾರ್ಯಾಚರಣೆಯಲ್ಲಿ 6 ಬೈಕ್ ಕಳ್ಳರನ್ನು ಬಂಧಿಸಿದ್ದು ಅವರಿಂದ ₹6,10,000 ಮೌಲ್ಯದ 14 ಮೋಟಾರು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧವಾಗಿ ಅಮಿತ ಬಸವರಾಜ ಕೋಳಿ, ಆನಂದ ಯಲ್ಲಪ್ಪಾ ಘಸ್ತಿ, ಸುಮೀತ ಗಂಗಾರಾಮ ಕಮ್ಮಾರ, ಶಿವರಾಜ ನಿಂಗೌಡ ಪಾಟೀಲ, ಓಂಕಾರ ಮೋಹನ ಕಡಲಗಿಕರ, ಕಿರಣ ಹಣುಮಂತ ಕಮ್ಮಾರ ಅವರನ್ನು ಸಂಕೇಶ್ವರ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿ.ಪಿ.ಐ ಗಣಪತಿ ಕೊಂಗನೊಳ್ಳಿ, ಪಿ.ಎಸ್.ಐಗಳಾದ ವಿಠ್ಠಲ ನಾಯಿಕ, ಯು.ಎಸ್.ಶೆಟ್ಟೆನ್ನವರ, ಎ.ಎಸ್.ಐ ಗಳಾದ ಸಿ.ಜೆ.ಸಾರಾಪೂರೆ ಹಾಗೂ ಎಸ್.ಎಸ್.ಖೋತ ಹಾಗೂ ಸಿಬ್ಬಂದಿ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

