Breaking News

ಡಿಜಿ ಆದೇಶ ಗಾಳಿಗೆ… ಟ್ರಾಫಿಕ್ ಪೊಲೀಸರ ದೌರ್ಜನ್ಯ ಮಿತಿ ಮೀರಿ..!

ರಿಂಗ್ ರೋಡ್‌ನಿಂದ ಬೈಪಾಸ್‌ವರೆಗೆ ‘ಡಾಕ್ಯುಮೆಂಟ್ ಚೆಕ್’ ದಂಧೆ..?

ಟ್ರಾಫಿಕ್ ಪೊಲೀಸರ ವಿರುದ್ಧ ಸ್ಫೋಟಕ ಆರೋಪ..! ಜನರ ರಕ್ಷಕರುನಾ…? ಅಥವಾ ರಸ್ತೆ ಮೇಲೆ ಹಪ್ತಾ ವಸೂಲಿ ಗ್ಯಾಂಗ್‌ನಾ..? ಟ್ರಾಫಿಕ್ ಪೊಲೀಸರ ವಿರುದ್ಧ ಜನರ ಆಕ್ರೋಶ ಸ್ಫೋಟ..! ರಸ್ತೆಯ ಮೇಲೆ ರಕ್ಷಕರುನಾ… ಅಥವಾ ಕಿರುಕುಳಗಾರರಾ..? ಟ್ರಾಫಿಕ್ ಪೊಲೀಸರ ವಿರುದ್ಧ ಸ್ಫೋಟಕ ಆರೋಪ! ನಗರದ ರಸ್ತೆಗಳಲ್ಲಿ ದಿನನಿತ್ಯ ಒಂದು ಹೊಸ ಭೀತಿ ಸೃಷ್ಟಿಯಾಗುತ್ತಿದೆ. ವಾಹನ ಸವಾರರಿಗೆ ಸುರಕ್ಷತೆ ನೀಡಬೇಕಾದ ಟ್ರಾಫಿಕ್ ಪೊಲೀಸರು ಈಗ ಕಿರುಕುಳದ ಪ್ರತಿರೂಪವಾಗುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ…

ಡಾಕ್ಯುಮೆಂಟ್ಸ್ ಚೆಕ್” ಎಂಬ ನೆಪದಲ್ಲಿ ಮಧ್ಯರಸ್ತೆಯಲ್ಲೇ ವಾಹನಗಳನ್ನು ಅಡ್ಡಗಟ್ಟಿ, ಚಾಲಕರನ್ನು ಗಂಟೆಗಳ ಕಾಲ ತಡೆದು ನಿಲ್ಲಿಸುವ ಘಟನೆಗಳು ಹೆಚ್ಚಾಗಿವೆ. ಹೆಲ್ಮೆಟ್, ಇನ್ಸೂರೆನ್ಸ್, ಆರ್‌ಸಿ ಬುಕ್ ಸೇರಿದಂತೆ ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಕೂಡ ಚಾಲಕರನ್ನು ಬಿಡದೇ ತಡೆದು ಸಮಯ ವ್ಯರ್ಥ ಮಾಡಲಾಗುತ್ತಿದೆ ಎಂಬುದು ವಾಹನ ಸವಾರರ ನೋವು…

ಇದೇ ವಿಚಾರ ಈಗ ಜನರ ಕೋಪಕ್ಕೆ ಪ್ರಮುಖ ಕಾರಣವಾಗಿದೆ…

ಇದು ಕೇವಲ ತಪಾಸಣೆನಾ…? ಅಥವಾ ಹಣ ವಸೂಲಿ ಮಾಡುವ ಹೊಸ ಮಾರ್ಗವಾ…?

ಎಂಬ ಅನುಮಾನಗಳು ಈಗ ಸಾರ್ವಜನಿಕರಲ್ಲಿ ಗಟ್ಟಿಯಾಗುತ್ತಿವೆ. ಕೆಲವೆಡೆ ಇದೇ ನೆಪ ಮಾಡಿಕೊಂಡು ಹಣ ವಸೂಲಿ ನಡೆಯುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದ್ದು, “ಎಲ್ಲಾ ಡಾಕ್ಯುಮೆಂಟ್ಸ್ ಕ್ಲಿಯರ್ ಇದ್ದರೂ ಏಕೆ ತಡೆ..? ಎಂಬ ಪ್ರಶ್ನೆ ಮತ್ತಷ್ಟು ಗಂಭೀರವಾಗುತ್ತಿದೆ…

ಕೆಲವರು ನೇರವಾಗಿ “ಹಣ ಕೊಟ್ಟರೆ ಬಿಡುತ್ತಾರೆ” ಎಂಬ ಆರೋಪವನ್ನೂ ಮಾಡುತ್ತಿದ್ದಾರೆ…

ಇನ್ನೊಂದೆಡೆ, ಟ್ರಾಫಿಕ್ ಕ್ಲಿಯರ್ ಮಾಡಿ ಜಾಮ್ ನಿಯಂತ್ರಿಸುವುದು ಮುಖ್ಯ ಕರ್ತವ್ಯವಾಗಿರುವಾಗ, ಅದನ್ನು ಬಿಟ್ಟು ದಿನನಿತ್ಯ ಕೇಸ್ ಹಾಕುವತ್ತ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ…

GST (ಗುರಿ/ಟಾರ್ಗೆಟ್) ಹೆಸರಿನಲ್ಲಿ ಕೇಸ್ ಹಾಕುವ ಒತ್ತಡ ಇದೆ, ಅದಕ್ಕಾಗಿ ಸಾಮಾನ್ಯ ಜನರನ್ನು ಟಾರ್ಗೆಟ್ ಮಾಡಲಾಗುತ್ತಿದೆ” ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ…

ಇನ್ನೊಂದೆಡೆ ಮೇಲಧಿಕಾರಿಗಳ ಆದೇಶಗಳು ಕೇವಲ ಕಾಗದದಲ್ಲೇ ಉಳಿದಿವೆಯೇ ಎಂಬ ಪ್ರಶ್ನೆ ತಲೆದೋರಿದೆ. ತಪ್ಪು ಮಾಡಿದ ಪೊಲೀಸ್ ಇನ್ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿಯನ್ನು ತಕ್ಷಣ ಸಸ್ಪೆಂಡ್ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ…

ಕಾನೂನು ಪಾಲನೆ ಮಾಡುವವರೇ ಕಾನೂನು ಉಲ್ಲಂಘಿಸಿದರೆ…

ಜನರು ಯಾರನ್ನು ನಂಬಬೇಕು..? ಎಂಬ ಪ್ರಶ್ನೆ ಈಗ ಎಲ್ಲರ ಮನಸ್ಸಿನಲ್ಲಿ ಮೂಡಿದೆ… ಆದರೆ ದೊಡ್ಡ ಪ್ರಶ್ನೆ ಒಂದೇ

ಈ ದೌರ್ಜನ್ಯಕ್ಕೆ ಬ್ರೇಕ್ ಬೀಳುತ್ತದೆಯಾ…?

ಅಥವಾ ಇದೇ ರೀತಿ ಮುಂದುವರೆಯುತ್ತದೆಯಾ…?

ಇದೀಗ ಎಲ್ಲರ ಕಣ್ಣು ಪೊಲೀಸ್ ಇಲಾಖೆಯ ಮುಂದಿನ ಹೆಜ್ಜೆಯ ಮೇಲೆ ನೆಟ್ಟಿದೆ…

Share News

About Shaikh BigTv

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *