Breaking News

ಸಾಲಗಾರನಿಗೆ ಹೆದರಿಸಲು ತಂದಿದ್ದ ಲಾಂಗ್‌ಗೆ ಬಲಿಯಾದ ನಿರಪರಾಧಿ ಯುವಕ! ಮೂವರು ಅರೆಸ್ಟ್

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆಯಲ್ಲಿ ನಡೆದ ಯುವಕನ ಬರ್ಬರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಜ್ಜಹಳ್ಳಿ ಗ್ರಾಮದ ನಿಶಾಂತ್, ಕಾರ್ತಿಕ್ ಹಾಗೂ ಗೂಳೂರುದೊಡ್ಡಿಯ ರವಿ ಬಂಧಿತ ಆರೋಪಿಗಳಾಗಿದ್ದಾರೆ. ಸಾಲದ ವಿಚಾರಕ್ಕೆ ಅಶೋಕ್ ಎಂಬಾತನನ್ನು ಬೆದರಿಸಲು ಬಂದಿದ್ದ ಆರೋಪಿಗಳು ಬಾರ್‌ನಲ್ಲಿ ಮದ್ಯಪಾನ ಮಾಡುತ್ತಿದ್ದ ವೇಳೆ ಸುನೀಲ್ ಜೊತೆ ಕ್ಷುಲ್ಲಕ ಜಗಳಕ್ಕೆ ಇಳಿದಿದ್ದರು. ಬಳಿಕ ರಸ್ತೆ ಮಧ್ಯೆ ಲಾಂಗ್‌ನಿಂದ ದಾಳಿ ನಡೆಸಿ ಸುನೀಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಕೇವಲ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಸುನೀಲ್ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮೂಡಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಮದ್ದೂರು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *