Breaking News

ಬಳ್ಳಾರಿಯಲ್ಲಿ ರಸ್ತೆ ಬದಿಯೇ ಗೋವಿನ ರುಂಡಗಳು ಪತ್ತೆ

ಬಳ್ಳಾರಿ: ನಗರದ ಕಪ್ಪಗಲ್ಲು ರಸ್ತೆಯ 9ನೇ ಕ್ರಾಸ್‌ನ ತೆರೆದ ಚರಂಡಿಯಲ್ಲಿ ಗೋವುಗಳ ರುಂಡಗಳನ್ನು ಎಸೆದಿರುವ ಘಟನೆ ಶನಿವಾರ ನಡೆದಿದ್ದು, ಸ್ಥಳದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಕಪ್ಪಗಲ್ಲು ರಸ್ತೆಯ 9ನೇ ಕ್ರಾಸ್ (ಅಡ್ಡರಸ್ತೆ)ನ ತೆರೆದ ಕಾಲುವೆಯಲ್ಲಿ ಎಸೆಯಲಾಗಿದ್ದ ಎರಡು ಗೋವುಗಳ ರುಂಡಗಳನ್ನು ಕಂಡಿರುವ ಬಿಜೆಪಿ ಕಾರ್ಯಕರ್ತರೊಬ್ಬರು ಕೂಡಲೇ ಸ್ಥಳದಲ್ಲಿ ಜಮಾಯಿಸಿ, ಕಾಲುವೆಯಲ್ಲಿದ್ದ ಎರಡು ರುಂಡಗಳುಳ್ಳ ಚೀಲವನ್ನು ರಸ್ತೆಯಲ್ಲಿಟ್ಟು ಅಲ್ಲೇ ಧರಣಿ ಕುಳಿತರು. ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಆಗಮಿಸಿ, ರುಂಡಗಳನ್ನು ಪರಿಶೀಲನೆ ನಡೆಸಿತು. ನಂತರ ಪಶುಸಂಗೋಪನಾ ಇಲಾಖೆ ವೈದ್ಯರು ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು ಆಗಮಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಪಶುಸಂಗೋಪನಾ ಇಲಾಖೆಯಿಂದ ರುಂಡಗಳೆರಡನ್ನೂ ಮರಣೋತ್ತರ ಪರೀಕ್ಷೆ ನಡೆಸಿ, ಅವುಗಳನ್ನು ಅಂತ್ಯಸಂಸ್ಕಾರ ಮಾಡಲು ಧರಣಿ ನಿರತರಿಗೆ ನೀಡಬೇಕು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಧರಣಿ ಕೈಬಿಡಲಾಯಿತು.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *