
ಬೆಂಗಳುರು ; ಸ್ನೇಹಿತರ ಜತೆ ಗುರುವಾರ (ಡಿ.2) ರಾತ್ರಿ ಪಬ್‌ಗೆ ತೆರಳಿದ್ದ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಲಾಗಿದೆ. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ! ಹೌದು, ಬೆಂಗಳೂರಿನ ಸದಾಶಿವನಗರದ ಪಬ್‌ವೊಂದರಲ್ಲಿ ಮಾರಾಮಾರಿ ನಡೆದಿದೆ. ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಕೀರ್ತಿ ಅವರ ಫೋಟೋ ಕ್ಲಿಕ್ಕಿಸಿದ್ದರು. ಫೋಟೋ ಕ್ಲಿಕ್ಕಿಸಿದ್ದನ್ನು ಕೀರ್ತಿ ಪ್ರಶ್ನೆ ಮಾಡಿದರು. ಫೋಟೋ ತೆಗೆದ ವ್ಯಕ್ತಿಗೆ ಬಾಯಿಗೆ ಬಂದಂತೆ ಬೈಯ್ದಿದ್ದೂ ಅಲ್ಲದೇ ಮೊಬೈಲ್ ಕಸಿದುಕೊಳ್ಳಲು ಮುಂದಾದರು. ಆ ವ್ಯಕ್ತಿ ಕ್ಷಮೆ ಕೇಳಿದರೂ ಕೀರ್ತಿ ಆರ್ಭಟ ನಿಂತಿರಲಿಲ್ಲ. ಆ ಕಾರಣದಿಂದ ರೋಸಿ ಹೋಗಿದ್ದ ವ್ಯಕ್ತಿಯು ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹಲ್ಲೆ ಬಳಿಕ ಕೀರ್ತಿ ಪರಿಸ್ಥಿತಿ ಹೇಗಿದೆ? ಈ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

