Breaking News

ಮಂಗಳೂರು | ತೋಟದಲ್ಲಿ ಗೋ ವಧೆ: ಪ್ರಕರಣ

ತೋಟದಲ್ಲಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಕೆ.ಅಬ್ದುಲ್‌ ರಫೀಕ್‌, ಅದ್ರಾಮ ಮಂತೂರು ಮತ್ತು ಅಬ್ದುಲ್‌ ಖಾದರ್‌ ಪಣೆಮಜಲು ಎಂಬುವವರ ವಿರುದ್ಧ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡಬ ಸವಣೂರು ಗ್ರಾಮದ ಮಾಂತೂರು ಮುಂಡತ್ತಡ್ಕದಲ್ಲಿ ಗೋವಧೆ ನಡೆಯುತ್ತಿದ್ದ ಕುರಿತು ಮೇ 29ರಂದು ಮಾಹಿತಿ ಲಭಿಸಿತ್ತು. ಉಪನಿರೀಕ್ಷಕ ಸಂತೋಷ್‌ ಬಿ.ಪಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋದಾಗ ಜಾನುವಾರನ್ನು ಕಡಿದು ಹಾಕಿದ್ದು ಕಂಡುಬಂದಿದೆ. ವಿಚಾರಿಸಿದಾಗ ಪರವಾನಗಿ ಇಲ್ಲದೆ ಈ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *