ಮಾವಿನಕಾಯಿ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಟೆಂಪೊವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಬೇತಮಂಗಲ ಸಮೀಪದ ಕೊಡಿಗೇಪಲ್ಲಿ ಗ್ರಾಮದಲ್ಲಿ ನಡೆದಿದೆ.ತಾಯಲೂರು ಕಡೆಯಿಂದ ವಿ.ಕೋಟ ಕಡೆಗೆ ಮಾವಿನಕಾಯಿ ತುಂಬಿಕೊಂಡು ಟೆಂಪೊ ಹೋಗುತ್ತಿತ್ತು. ಮಾರ್ಗ ಮಧ್ಯೆ ಕೊಡಿಗೇಪಲ್ಲಿ ಗ್ರಾಮದ ಬಳಿ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ.ಟೆಂಪೊ ಪಲ್ಟಿಯಾದ ರಭಸಕ್ಕೆ ಮಾವಿನಕಾಯಿ ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿವೆ. ಅರ್ಧಕ್ಕೂ ಹೆಚ್ಚು ಮಾವಿನ ವಾಹನಗಳ ಚಕ್ರಕ್ಕೆ ಸಿಲುಕಿವೆ. ಟೆಂಪೊ ಜಖಂ ಆಗಿದ್ದು, ಅದೃಷ್ಟವಶಾತ್ ಚಾಲಕ ಹಾಗೂ ವಾಹನದಲ್ಲಿರುವವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

