Breaking News

ಟಾಯ್ಲೆಟ್ಟಲ್ಲಿ ಸೊಸೆಯನ್ನು 10 ತಿಂಗಳಿಂದ ಕೂಡಿ ಹಾಕಿ ಅತ್ತೆ ಮಾವ ಹಿಂಸೆ

ಡೆಹ್ರಾಡೂನ್‌: ಅತ್ತೆ ಹಾಗೂ ಮಾವ ಇಬ್ಬರು ಸೇರಿ ತಮ್ಮ ಸೊಸೆಯನ್ನು ಬರೋಬ್ಬರಿ 10 ತಿಂಗಳು ಕಾಲ ಕೋಣೆ ಹಾಗೂ ಶೌಚಾಲಯದಲ್ಲೇ ಕೂಡಿ ಹಾಕಿ ಕ್ರೂರವಾಗಿ ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆಯೊಂದು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಪತಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಮಹಿಳೆ ತನ್ನ ಅತ್ತೆ-ಮಾವನ ಜೊತೆ ವಾಸಿಸುತ್ತಿದ್ದಳು. ಕಳೆದ ಜುಲೈನಿಂದ ಆಕೆಯನ್ನು ಒಂದೇ ಕೋಣೆ ಮತ್ತು ಶೌಚಾಲಯದಲ್ಲಿ ಕೂಡಿಹಾಕಲಾಗಿತ್ತು. ಪತಿ ರಜೆಗೆಂದು ಮನೆಗೆ ಬಂದಾಗೆಲ್ಲಾ ದೈಹಿಕವಾಗಿ ಹಿಂಸಿಸುತ್ತಿದ್ದನು. ಆಕೆಯ ಖಾಸಗಿ ಅಂಗಗಳಿಗೆ ಬಾಟಲಿ ಹೊಡೆದಿದ್ದು ತೀವ್ರ ಗಾಯಗಳಾಗಿವೆ. ಆಕೆಗೆ ತಿನ್ನಲು ಕೇವಲ ಹಸಿ ಅಕ್ಕಿ, ಈರುಳ್ಳಿ ಮತ್ತು ಮೆಣಸಿನಕಾಯಿಗಳನ್ನು ಮಾತ್ರ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *