Breaking News

ಬೆಳಗಾವಿ | ಬೈಪಾಸ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರ ಬಂಧನ

ಬೆಳಗಾವಿ: ತಾಲ್ಲೂಕಿನ ಹಲಗಾ-ಮಚ್ಛೆ ಬೈಪಾಸ್‌ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ನಾವಗೆಯ ಕೃಷ್ಣಾ ರಾಮನ್ನವರ, ರಣಕುಂಡೆಯ ಪ್ರಮೋದ ಪಾಟೀಲ, ಮಹಾರಾಷ್ಟ್ರದ ಚಂದಗಡದ ರಾಮಕೃಷ್ಣ ಮಾವುರಕರ, ಮಚ್ಛೆಯ ಪರಶುರಾಮ ಬುಗಡಿಕಟ್ಟಿ, ಖಾನಾಪುರ ತಾಲ್ಲೂಕಿನ ಕುಂಬರಗಾದ ಜಾನು ಗಾವಡೆ ಬಂಧಿತರು. ಅವರಿಂದ ₹1.20 ಲಕ್ಷ ಮೌಲ್ಯದ 2.33 ಕೆ.ಜಿ ಗಾಂಜಾ, ಕಾರು, ಬೈಕ್‌, ಮೊಬೈಲ್‌, ₹46 ಸಾವಿರ ನಗದು ಸೇರಿದಂತೆ ₹9.21 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *