Breaking News

ಬೆಂಗಳೂರಲ್ಲಿ ಘೋರ ದುರಂತ ; ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದು ಯುವಕ ಸಾವು.!

ಬೆಂಗಳೂರು ಜ್ಞಾನಭಾರತಿ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ರಾಮನಗರ ಜಿಲ್ಲೆಯ ಕೂಟಗಲ್ ಗ್ರಾಮದ ಹರೀಶ್ ಎಂದು ಗುರುತಿಸಲಾಗಿದೆ. ಮೆಜೆಸ್ಟಿಕ್‌ನಿಂದ ಮೈಸೂರಿಗೆ ತೆರಳುತ್ತಿದ್ದ ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲು ನಿಧಾನವಾಗಿ ಚಲಿಸುತ್ತಿದ್ದ ವೇಳೆ ಹರೀಶ್ ರೈಲು ಹತ್ತಲು ಪ್ರಯತ್ನಿಸಿದ್ದು, ಈ ವೇಳೆ ಕಾಲು ಜಾರಿ ರೈಲಿನ ಚಕ್ರದ ಅಡಿಗೆ ಸಿಲುಕಿದ್ದಾರೆ. ಪ್ರಯಾಣಿಕರು ತಕ್ಷಣ ಚೈನ್ ಎಳೆದು ರೈಲು ನಿಲ್ಲಿಸಿದರೂ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಚಲಿಸುತ್ತಿರುವ ರೈಲುಗಳನ್ನು ಹತ್ತಲು ಅಥವಾ ಇಳಿಯಲು ಪ್ರಯತ್ನಿಸಬಾರದು ಎಂದು ರೈಲ್ವೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Share News

About BigTv News

Check Also

3 ವರ್ಷದಿಂದ ಪ್ರೀತಿಸುವಂತೆ ಕಿರುಕುಳ: ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿಕೊಂಡ ಯುವಕ!

ಮೈಸೂರು: ಪ್ರೇಮ ನಿರಾಕರಿಸಿದ್ದ ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಯುವಕನೊಬ್ಬ, ಮೈಸೂರಿನ ವಿಜಯನಗರದ ಡಿಪ್ಲೊಮಾ ಕಾಲೇಜು ಹಾಸ್ಟೆಲ್ ಬಳಿ ಬೆಂಕಿಯಿಂದ …

Leave a Reply

Your email address will not be published. Required fields are marked *