ಯಾದಗಿರಿ: ದಟ್ಟ ಅರಣ್ಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಜೋಗತಿ ಮಹಿಳೆಯ ಶವ ಪತ್ತೆಯಾದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಿಯಕರ ಸುರೇಶ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ನಾಲ್ವಾರ್ ಗ್ರಾಮದ ಶಾಂತಮ್ಮ (48) ಕೊಲೆಯಾದವರು. ಶಾಂತಮ್ಮಳ ಕುಟುಂಬಸ್ಥರು ಸ್ಥಳದಲ್ಲಿ ಸಿಕ್ಕ ಬಳೆಯನ್ನು ಗುರುತಿಸಿದ ಬಳಿಕ ಆಕೆಯ ಗುರುತು ಪತ್ತೆಯಾಯಿತು. ಕಾಲ್ ಡಿಟೇಲ್ಸ್ ಪರಿಶೀಲಿಸಿದಾಗ ಕೊನೆಯದಾಗಿ ಸುರೇಶ್ ಕರೆ ಮಾಡಿರುವುದು ಗೊತ್ತಾಗಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಶಾಂತಮ್ಮ ₹1 ಲಕ್ಷ ಸಾಲ ಕೊಡಿಸಿದ್ದು, ಹಣ ವಾಪಸ್ ನೀಡುವಂತೆ ಹಾಗೂ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಕೆರಳಿದ ಸುರೇಶ್ ಆಕೆಯನ್ನು ಅರಣ್ಯಕ್ಕೆ ಕರೆದೊಯ್ದು ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಪೆಟ್ರೋಲ್ ಸುರಿದು ಶವಕ್ಕೆ ಬೆಂಕಿ ಹಚ್ಚಿದ್ದಾಗಿ ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

