Breaking News

ಉಗ್ರ ಸಂಘಟನೆ ಜತೆ ಸಂಪರ್ಕ ಇಬ್ಬರ ಬಂಧನ!

ತುಮಕೂರು: ಸಾಮಾಜಿಕ ಜಾಲತಾಣದ ಮೂಲಕ ಶತೃ ರಾಷ್ಟ್ರದ ಉಗ್ರ ಸಂಘಟನೆ ಜತೆ ಸಂಪರ್ಕ ಸಾಧಿಸಿರುವ ಶಂಕಿತರನ್ನು ಬಂಧಿಸಲಾಗಿದೆ. ಐಸಿಸ್ ಉಗ್ರ ಸಂಘಟನೆ ಜತೆ ಇನ್ ಸ್ಟಾಗ್ರಾಂ ಮೂಲಕ ಸಂಪರ್ಕ ಸಾಧಿಸಿರುವ ತುಮಕೂರಿನ ಅಲ್ಲಾಭಕ್ಷ ದಾವಣಗೆರೆಯ ಜಮೀರ್ ಖಾನ್ ಬಂಧಿತರು. ದೇಶಗಳಲ್ಲಿ ವಿದ್ವಾಂಸಕ ಕೃತ್ಯ ನಡೆಸಲು ಸ್ಕೆಚ್ ಹಾಕಿದ್ದ ತಂಡದ ಜತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಯುವಕರಿಬ್ಬರು ಸಂಪರ್ಕ ಹೊಂದಿದ್ದು ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ಕೊಟ್ಟಿರುವ ಅನುಮಾನಗಳನ್ನು ‌ಮೂಡಿಸಿದೆ. ತುಮಕೂರು ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಅಲ್ಲಾಭಕ್ಷನ‌ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಕೃತ್ಯದಲ್ಲಿ ದಾವಣಗೆರೆಯಲ್ಲಿ ಜಮೀರ್ ಖಾನ್ ಸಹ ಭಾಗಿಯಾಗಿರುವುದನ್ನು ಬಾಯಿಬಿಟ್ಟಿದ್ದಾನೆ. ಐಸಿಸ್ ಗೆ ಫಂಡಿಂಗ್ ಮಾಡುತ್ತಿದ್ದವರ ಸಂಪರ್ಕದಲ್ಲಿದ್ದ ಯುವಕರಿಬ್ಬರು ಪಾಕ್ ನ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ವ್ಯಾಟ್ಸಾ ಆಯಪ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಸಂಪರ್ಕ ಸಾಧಿಸಿದ್ದು ಪಾಕಿಸ್ತಾನ್ ಇಂಟಲಿಜೆನ್ಸ್ ಅಪರೇಟರ್ಸ್ ಆಗಿ ಕೆಲಸ ಮಾಡುತ್ತಿದ್ದರೇ‌ ಎಂಬ ಶಂಕೆ ಮೂಡಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *