ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ತರಕಾರಿ ಖರೀದಿಸುವ ನೆಪದಲ್ಲಿ ಬಂದ ಐವರ ಗ್ಯಾಂಗ್ ತರಕಾರಿ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು 1 ಲಕ್ಷ ರೂ. ನಗದು ದೋಚಿ ಪರಾರಿಯಾಗಿದೆ. ಭಾನುವಾರ ಸಂತೆ ವೇಳೆ ನಡೆದ ಈ ಘಟನೆ ಸ್ಥಳೀಯ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ. ಲಕ್ಷ್ಮೀ ವೆಂಕಟೇಶ್ವರ ತರಕಾರಿ ಮಳಿಗೆಯ ಮಾಲೀಕ ಮೌನೇಶ್ ಅವರೊಂದಿಗೆ ವ್ಯಾಪಾರದ ಮಾತುಗಳನ್ನಾಡಿದ ಆರೋಪಿಗಳು, ಒಂದು ರೂಪಾಯಿ ನಾಣ್ಯವನ್ನು ಕೆಳಗೆ ಬಿಸಾಕಿ ಅದನ್ನು ಎತ್ತಲು ಬಗ್ಗಿದ ವೇಳೆ ಕುಂಕುಮ ಹಾಗೂ ಬಂಡಾರ ಎರಚಿ ಗೊಂದಲ ಸೃಷ್ಟಿಸಿದ್ದಾರೆ. ಬಳಿಕ ಗಲ್ಲಾಪೆಟ್ಟಿಗೆಯಲ್ಲಿದ್ದ 1 ಲಕ್ಷ ರೂ. ನಗದನ್ನು ಕದ್ದೊಯ್ದಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

