Breaking News
Featured Video Play Icon

ಹುಬ್ಬಳ್ಳಿ ಕೊಲೆಗಳ ಹಿಂದಿದೆಯಾ ಡ್ರಗ್ಸ್ ಮಾಫಿಯಾ..?: ಅಮಲಿನಲ್ಲಿಯೇ ಹರಿಯುತ್ತಿದೆ ನೆತ್ತರು..!

ಹುಬ್ಬಳ್ಳಿ: ಅವಳಿನಗರದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗಿಂತ ಅಕ್ರಮ ಚಟುವಟಿಕೆಗಳ ಸದ್ದು ಜೋರಾಗಿದೆ. ಸಾಲು ಸಾಲು ಕೊಲೆಗಳು ಧಾರವಾಡ ಜಿಲ್ಲೆಯ ಜನರ ನಿದ್ದೆ ಗೆಡಸಿದ್ದು, ಈ ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ ನಡೆದ 14 ಕೊಲೆಗಳ ಹಿಂದೆ ಮಾದಕ ವಸ್ತುಗಳ ಘಾಟು ಹೆಚ್ಚಾಗಿದೆ ಎಂಬ ಮಾತುಗಳು ಅವಳಿ ನಗರದಲ್ಲಿನ ಗಲ್ಲಿ-ಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..ಹುಬ್ಬಳ್ಳಿ-ಧಾರವಾಡದ ಅವಳಿನಗರ ಅದರಲ್ಲು ಹೂ ಬಳ್ಳಿ ಅಂತ ಕರೆಯುತ್ತಿದ್ದ ಹುಬ್ಬಳ್ಳಿಯ ನಗರದ ಮಾರುಕಟ್ಟೆಯಲ್ಲಿ ಸರಾಗವಾಗಿ ದೊರೆಯುವ ವಿವಿಧ ಮಾದರಿಯ ಮಾದಕ ವಸ್ತುಗಳು ಅತಿ ಕಡಿಮೆ ದರದಲ್ಲಿ ಯುವಕ-ಯುವತಿಯರ ಕೈ ಸೇರುತ್ತಿವೆ. ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ನಂಟು ಈ ಕೊಲೆ ಪ್ರಕರಣಗಳ ಹಿಂದೆದೆ ಅನ್ನೊದು ಆಘಾತಕಾರಿ ಸಂಗತಿ. ಹುಬ್ಬಳ್ಳಿಯ ಜನರು ಬೆಚ್ಚಿ ಬಿಳಿಸುವ ಎರಡು ಪ್ರಕರಣಗಳು ಏಪ್ರಿಲ್.18 ರಂದು ನೇಹಾ ಹಿರೇಮಠ ಕೊಲೆ ಪ್ರಕರಣ ಮತ್ತು ಮೇ 15 ರಂದು ಅಂಜಲಿ ಅಂಬಿಗೇರ ಭೀಕರ ಕೊಲೆ ಪ್ರಕರಣಗಳ ಕಾರಣ ಬೇರೆ ಬೇರೆ ಆಗಿದ್ದರು ಇದರ ಹಿಂದೆ ಇರುವ ಮಾದಕ ವಸ್ತುಗಳ ನಂಟು ಇದಕ್ಕೆ ಎಷ್ಟರ ಮಟ್ಟಿಗೆ ಪ್ರೇರಣೆ ನೀಡಿದೆ ಅನ್ನುವದೆ ಯಕ್ಷ ಪ್ರಶ್ನೆ ಆಗಿದೆ. ಮಾದಕ ವ್ಯಸನದಿಂದ ಮಾನಸಿಕತೆಯಿಂದ ಆಗುವ ಕ್ರೌರ್ಯದ ಬಗ್ಗೆ ಮನೋ ವೈದ್ಯರು ಏನಂತಾರೇ ಕೇಳಿ..; ಮಹೇಶ ದೇಸಾಯಿ (ಮನೋ ವೈದ್ಯರು) ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆಯಿಂದ ಚಿಗರು ಮಿಸೆಯ ಯುವ ಸಮುದಾಯ ಚಾಕು – ಚೂರಿಗಳನ್ನ ಬಳಸಿ ಕೊಲೆ ಮಾಡುವ ಹಂತಕ್ಕೆ ಬಂದಿದ್ದಾರೆ ಈ ಕಾರಣಕ್ಕಾಗಿ ರೌಡಿ ಶೀಟರ್‌ಗಳು ಪಟ್ಟಿ ದೊಡ್ಡದಾಗುತ್ತಾ ಸಾಗಿದೆ. ಮದ್ಯ ಕುಡಿಸಲು ನಿರಾಕರಣೆ, ಮಟ್ಕಾ ಹಣ ವಾಪಸ್ ಕೊಡದಿರುವದು , ನಶೆಯಲ್ಲಿ ಅನುಮಾನದಿಂದ ಫೋನ್ ಕಾಲ್ ರಿಸೀವ್ ಮಾಡಲಿಲ್ಲ ಹಾಗು ಪ್ರೀತಿಗೆ ನಿರಾಕರಣೆ, ಮದುವೆಗೆ ಒಪ್ಪಲಿಲ್ಲ, ಹಣ ವಾಪಸ್ ಕೊಡಲಿಲ್ಲ ಎಂಬುದರ ಜೊತೆಗೆ ಗುಟಕಾ ಚೀಟ್ ಕೊಡಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೂ ನಶೆಯಲ್ಲೇ ಬರ್ಬರ ಕೊಲೆಗಳು ನಡೆದಿವೆ.; ಮಹೇಶ ದೇಸಾಯಿ (ಮನೋ ವೈದ್ಯರು) ಗಾಂಜಾ ಸೊಪ್ಪನ್ನು ಉತ್ತರ ಕರ್ನಾಟಕದ ಕೆಲ ಜಿಲ್ಲೆಯ ಹಳ್ಳಿಗಳಲ್ಲಿ ಬೆಳೆಯಲಾಗುತ್ತಿದೆ ಅನ್ನುವ ಮಾತು ಎಷ್ಟು ಸತ್ಯ ಅಷ್ಟೆ ಹೊರ ರಾಜ್ಯದಿಂದದಲು ಬರುತ್ತಿರುವದು ಅಷ್ಟೇ ಸತ್ಯ. ಹುಬ್ಬಳ್ಳಿಯಲ್ಲಿ ಗಾಂಜಾ ಅತ್ಯಂತ ಕಡಿಮೆ ದರದಲ್ಲಿ ಯುವಕರ ಕೈಗೆ ಸುಲಭವಾಗಿ ಲಭಿಸುತ್ತಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರೇ ಗಾಂಜಾ ಮಾರಾಟಗಾರರ ಟಾರ್ಗೆಟ್, ಬಹುಪಾಲು ಕಾಲೇಜುಗಳು ಇರುವ ರಸ್ತೆಗಳೇ ದಂಧೆಕೋರರ ಅಡ್ಡೆ. ಆದರೆ, ಚರಸ್, ಆಫೀಮ್ ಹಾಗೂ ಹೆರಾಯಿನ್ ಬೇರೆ ಬೇರೆ ರಾಜ್ಯಗಳಿಂದ ಧಾರವಾಡ ಜಿಲ್ಲೆಗೆ ಸರಬರಾಜಾಗುತ್ತಿದ್ದು, ಮೂಲ ಪತ್ತೆ ಹಚ್ಚಬೇಕಿದೆ.

Share News

About Shaikh BigTv

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *