ಹುಬ್ಬಳ್ಳಿಯ
ಪತ್ನಿಯಿಂದ ಜೀವಬೆದರಿಕೆ ಇದೆ ಎಂದು ಆರೋಪಿಸಿ ನಗರದ ಖ್ಯಾತ ವೈದ್ಯ ಹಾಗೂ ರಾಜಕಾರಣಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ.
ಹುಬ್ಬಳ್ಳಿಯ ಖ್ಯಾತ ನ್ಯೂರೋಲಜಿಸ್ಟ್ ಡಾ.ಕ್ರಾಂತಿಕಿರಣ್ ಎಂಬುವವರೇ ತನ್ನ ಪತ್ನಿಯ ವಿರುದ್ದ ದೂರು ನೀಡಿದವರು.
ವಿದ್ಯಾನಗರ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ದ ದೂರು ಡಾ. ಕ್ರಾಂತಿಕಿರಣ ದೂರು ದಾಖಲಿಸಿದ್ದಾರೆ.
ಐಪಿಸಿ ಸೆ.506,504,323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಪತ್ನಿ ಶೋಭಾ ಹಾಗೂ ಪ್ರಿಯಕರನಿಂದ ಜೀವಬೆದರಿಕೆ ಇದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪತ್ನಿ ಶೋಭಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ.
ಅದನ್ನ ಕೇಳಲು ಹೋದ್ರೆ ತನ್ನ ಪ್ರಿಯಕರನ ಜೊತೆಗೂಡಿ ಕೊಲೆ ಮಾಡೋದಾಗಿ ಬೇದರಿಕೆ ಹಾಕಿದ್ದಾಳೆ. ಇಬ್ಬರು ಪರಸ್ಪರ ಪ್ರೀತಿಸಿ ಡಾ.ಕ್ರಾಂತಿಕಿರಣ ಹಾಗೂ ಶೋಭಾ ಮದುವೆಯಾಗಿದ್ದಾರೆ.
ಶೋಭಾ ಕೂಡಾ ಹುಬ್ಬಳ್ಳಿಯ ಖ್ಯಾತ ವೈದ್ಯೆಯಾಗಿದ್ದು,
ಇಬ್ಬರು ಸೇರಿ ಹುಬ್ಬಳ್ಳಿಯ ಲ್ಲಿ ದೊಡ್ಡ ಖಾಸಗಿ ಆಸ್ಪತ್ರೆಗ ಕಟ್ಟಿದ್ದರು. ಅಲ್ಲದೆ ಡಾ.ಕ್ರಾಂತಿಕಿರಣ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಕಳೆದ ವಿಧಾನಸಭೆಯಲ್ಲಿ
ಹು-ಧಾ ಪೂರ್ವ ಮೀಸಲು ಕ್ಷೇತ್ರ ಆಕಾಂಕ್ಷಿಯಾಗಿದ್ದರು.
ಆದ್ರೆ ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತ್ತು. ಆದ್ರೆ ಈಗ ಪತ್ನಿಯ ವಿರುದ್ದವೇ ಖ್ಯಾತ ವೈದ್ಯ ದೂರು ದಾಖಲಿಸಿ ಸುದ್ದಿಯಲ್ಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





