Breaking News

ದಕ್ಷ ಕಮಿಷನರ್ ಎನ್ ಶಶಿಕುಮಾರ ಹೆಸರಿಗೆ ಮಸಿ ಬಳಿಯುವ ಯತ್ನ..? ಇಲಾಖೆಯಲ್ಲೇ ಚರ್ಚೆಗೆ ಗ್ರಾಸವಾದ ಬೆಳವಣಿಗೆ..!

ಕದ್ದು ಹಾಲು ಕುಡಿದು ಬೆನ್ನಿಗೆ ಚೂರಿ ಹಾಕೋರ ಆಟ..? ಕಮಿಷನರ್ ಗಮನ ಈ ಕಡೆಯೂ ಇರಲಿ..!

ನಿಷ್ಠಾವಂತ ಅಧಿಕಾರಿಯ ವಿರುದ್ಧ ಕೆಲವರ ಒಳಚಳವಳಿ..? ಮೇಲಾಧಿಕಾರಿಗಳಿಂದಲೇ ಧೈರ್ಯದ ಮಾತುಗಳಾ..?

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ದಕ್ಷ ಹಾಗೂ ನಿಷ್ಠಾವಂತ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಅವರ ಹೆಸರನ್ನು ಕೆಡಿಸಲು ಕೆಲವೊಂದು ಒಳಚಟುವಟಿಕೆಗಳು ನಡೆಯುತ್ತಿವೆಯೇ ಎಂಬ ಚರ್ಚೆಗಳು ಇಲಾಖೆಯೊಳಗೇ ಕೇಳಿಬರುತ್ತಿವೆ ಎನ್ನಲಾಗಿದೆ…

ಅಕ್ರಮ ಚಟುವಟಿಕೆ, ರೌಡಿಶೀಟರ್‌ಗಳ ಹಾವಳಿ, ಹವಾಲಾ, ಬಡ್ಡಿ ದಂಧೆ ಸೇರಿದಂತೆ ಹಲವು ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಕಾರಣ, ಅಪರಾಧ ಚಟುವಟಿಕೆ ನಡೆಸುವವರಲ್ಲಿ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಅವರ ಹೆಸರೇ ಭಯ ಮೂಡಿಸಿದೆ ಎನ್ನಲಾಗುತ್ತಿದೆ…

ಕಾನೂನು ಉಲ್ಲಂಘನೆ, ಅಕ್ರಮ ವ್ಯವಹಾರ ಹಾಗೂ ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣವಾಗುವವರ ವಿರುದ್ಧ ಯಾವುದೇ ಒತ್ತಡಕ್ಕೂ ಮಣಿಯದೇ ಕ್ರಮ ಕೈಗೊಳ್ಳುತ್ತಿರುವುದು ಸಾರ್ವಜನಿಕರಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ…

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಟ್ಟುನಿಟ್ಟಿನ ನಿಲುವು, ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಶೈಲಿ ಹಾಗೂ ನಿಷ್ಠಾವಂತ ಆಡಳಿತದಿಂದ ಜನರ ವಿಶ್ವಾಸ ಗಳಿಸಿರುವ ಕಮಿಷನರ್ ವಿರುದ್ಧ ಕೆಲವೊಂದಿಷ್ಟು ಮಂದಿ ರಾಜಕೀಯ ಬಣ್ಣ ಹಚ್ಚುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ…

ವಿಶೇಷವಾಗಿ, ಇಲಾಖೆಯಲ್ಲೇ ಕೆಲವೊಂದು ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿ ಕಮಿಷನರ್ ಅವರ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ವದಂತಿ ಹಾಗೂ ಗೊಂದಲ ಸೃಷ್ಟಿಸುವ ಕೆಲಸಕ್ಕೆ ಇಳಿದಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದನ್ನೇ ಕೆಲವರು ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಂಡು ಕಮಿಷನರ್ ಹೆಸರಿಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ ಎನ್ನುವ ಚರ್ಚೆಯೂ ಜೋರಾಗಿದೆ..

ಇದಕ್ಕೆ ಸಂಬಂಧಿಸಿದಂತೆ, ಮೇಲಾಧಿಕಾರಿಗಳು ಸ್ವತಃ ಕರೆ ಮಾಡಿ “ಇಂತಹ ಬೆಳವಣಿಗೆಗಳಿಗೆ ಹೆಚ್ಚು ಗಮನ ಕೊಡಬೇಡಿ, ನಿಷ್ಠೆಯಿಂದ ಕೆಲಸ ಮುಂದುವರಿಸಿ” ಎಂದು ಕಮಿಷನರ್ ಅವರಿಗೆ ಧೈರ್ಯ ತುಂಬಿದ್ದಾರೆ ಎನ್ನುವ ಮಾಹಿತಿ ಪೊಲೀಸ್ ವಲಯದಲ್ಲಿ ಹರಿದಾಡುತ್ತಿದೆ..

ನಿಷ್ಠಾವಂತ ಅಧಿಕಾರಿಗಳ ವಿರುದ್ಧ ಕೆಲವರು ಉದ್ದೇಶಪೂರ್ವಕವಾಗಿ ವಾತಾವರಣ ನಿರ್ಮಿಸಲು ಯತ್ನಿಸುವುದು ಹೊಸದಲ್ಲ. ಆದರೆ ಸತ್ಯ ಮತ್ತು ಕೆಲಸವೇ ಅಂತಿಮವಾಗಿ ಮಾತನಾಡುತ್ತದೆ” ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.. Bigtv – ಸ್ಫೋಟಕ ಸುದ್ದಿ

Share News

About Shaikh BigTv

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *