ಠಾಣೆ ಅಧಿಕಾರಿ ಅಲ್ಲ, ಇಲಾಖೆಯಲ್ಲಿ ‘ಹವಾ’ ಇರುವ ಪೊಲೀಸರಿಗೇ ದಿನನಿತ್ಯ ಹಣ ಹೋಗ್ತಿದೆಯಾ..? ‘ಪ್ರತಿದಿನ ಜಿಎಸ್‌ಟಿ’ ಹೆಸರಲ್ಲಿ ನಡೆಯುತ್ತಿರುವ ಆರೋಪಗಳ ಸತ್ಯಾಸತ್ಯತೆ ಏನು..?
ಹುಬ್ಬಳ್ಳಿ/ಧಾರವಾಡ: ಅವಳಿ ನಗರದಲ್ಲಿ ಟ್ರಾಫಿಕ್ ಜಾಮ್ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದರೂ, ಅದನ್ನು ಕ್ಲಿಯರ್ ಮಾಡುವ ಬದಲು ವಾಹನ ತಪಾಸಣೆ ಹೆಸರಲ್ಲಿ ಜನರಿಗೆ ಕಿರುಕುಳ ಹೆಚ್ಚಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ..
ರಸ್ತೆಗಳಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಇದ್ದರೂ ಅದನ್ನು ನಿಯಂತ್ರಿಸುವ ಬದಲು, ವಾಹನ ಅಡ್ಡಗಟ್ಟಿ ದಂಡ, ದಾಖಲೆ ತಪಾಸಣೆ ಹಾಗೂ ಕಿರಿಕಿರಿ ಮಾತ್ರ ಹೆಚ್ಚಾಗಿದೆ ಎಂದು ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ..ತಿಂಗಳ 30 ದಿನವೂ ವಾಹನ ತಪಾಸಣೆನೇ ಕೆಲಸನಾ..?

ಟ್ರಾಫಿಕ್ ಸಮಸ್ಯೆ ಬಗೆಹರಿಸೋರು ಯಾರು..? ಎನ್ನುವುದು ಈಗ ಅವಳಿ ನಗರದ ಜನರ ಪ್ರಶ್ನೆಯಾಗಿದೆ. ಬೆಳಗ್ಗೆ-ಸಂಜೆ ಟ್ರಾಫಿಕ್ ಅವ್ಯವಸ್ಥೆಯಿಂದ ಜನರು ನರಳುತ್ತಿದ್ದರೂ, ಸಮಸ್ಯೆ ಪರಿಹಾರಕ್ಕಿಂತ ವಾಹನ ಸವಾರರ ಮೇಲೆ ಒತ್ತಡ ಹೆಚ್ಚಾಗಿದೆ ಎಂಬ ಆರೋಪ ಕೇಳಿಬರುತ್ತಿದೆ…
ಇದರ ನಡುವೆ ಟ್ರಾಫಿಕ್ ವಲಯದಲ್ಲಿ “ಪ್ರತಿದಿನ ಜಿಎಸ್‌ಟಿ” ಎಂಬ ಪದವೂ ಭಾರೀ ಚರ್ಚೆಗೆ ಕಾರಣವಾಗಿದೆ. ಅಂದರೆ, ಒಬ್ಬ ASI ಎಎಸ್‌ಐ ದಿನಕ್ಕೆ ₹1300 ರಿಂದ ₹1800 ವರೆಗೆ ಠಾಣೆಯ ಅಧಿಕಾರಿಗೆ ನೀಡಬೇಕು ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆ ಯಾವುದೇ ಸ್ಪಷ್ಟ ಲೆಕ್ಕಪತ್ರ ಇರುವುದಿಲ್ಲ ಎನ್ನುವ ಮಾತುಗಳೂ ಹರಿದಾಡುತ್ತಿವೆ.. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂಬ ಆಗ್ರಹವೂ ಹೆಚ್ಚಾಗಿದೆ..
ಇದೀಗ ಸಂಬಂಧಪಟ್ಟ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಗೃಹ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ..
ವಾಹನ ತಪಾಸಣೆ ಹೆಸರಲ್ಲಿ ಕಿರುಕುಳ, ಅನಗತ್ಯ ಕಿರಿಕಿರಿ ಹಾಗೂ ಅಕ್ರಮ ವಸೂಲಿ ಆರೋಪಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಸಂಬಂಧಪಟ್ಟ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳ ವಿರುದ್ಧ ಅಮಾನತು (Suspension) ಸೇರಿದಂತೆ ಕಠಿಣ ಕ್ರಮ ಜರುಗಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ..ಜನರ ಸುಗಮ ಸಂಚಾರ ಮುಖ್ಯವಾ..?
ಇಲ್ಲ ದಂಡದ ದರ್ಪವೇ ಮುಖ್ಯವಾ..?” ಎಂಬ ಪ್ರಶ್ನೆ ಈಗ ಹುಬ್ಬಳ್ಳಿ-ಧಾರವಾಡದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹೊಸ ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಯಾವ ಖಡಕ್ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ..
bigtvnews | Hubli Dharwad News | Kannada News | Karnataka News Hubli News | News In Hubli | Local news

