ಪಣಜಿ: ಪ್ರಸಕ್ತ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಗೋವಾ ರಾಜ್ಯದ ಜನರಿಗೆ ದೊಡ್ಡ ಉಡುಗೊರೆ ಲಭಿಸಿದ್ದು, ಇಂಧನ ಸಚಿವ ಸುದೀನ ಧವಳೀಕರ್ ಅವರು ದೊಡ್ಡ ಘೋಷಣೆ ಮಾಡಿದ್ದಾರೆ, ಪ್ರತಿ ತಿಂಗಳು 300-400 ಯೂನಿಟ್ ವಿದ್ಯುತ್ ಬಳಕೆದಾರರಿಗೆ ಗೋವಾ ಸರ್ಕಾರ ಉಚಿತ ವಿದ್ಯುತ್ ಪೂರೈಕೆ ಮಾಡಲಿದೆ.
ಗೋವಾ ರಾಜ್ಯ ಇಂಧನ ಸಚಿವ ಧರ್ಮಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಈ ವಿಶೇಷ ಉಡುಗೊರೆಯ ಘೋಷಣೆ ಮಾಡಿದ್ದಾರೆ. ತಮ್ಮ ತಮ್ಮ ಊರಿನಲ್ಲಿ ಸೋಲಾರ್ ಪ್ಲ್ಯಾಂಟ್ ನಿರ್ಮಾಣ ಮಾಡಲು ಪಾಳು ಬಿದ್ದ ಭೂಮಿಯ ಮಾಹಿತಿ ನೀಡಲು ಗೋವಾ ರಾಜ್ಯದ ಜನರು ಹಾಗೂ ಸ್ಥಳೀಯ ಶಾಸಕರು ಮುಂದೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ಗೋವಾ ರಾಜ್ಯದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರದ ಸಹಕಾರ ಲಭಿಸಿದೆ. ಈ ಸಹಕಾರದಿಂದಾಗಿ ವಿದ್ಯುತ್ ಕ್ಷೇತ್ರದಲ್ಲಿಯೂ ಕೂಡ ಗೋವಾ ರಾಜ್ಯ ಸ್ವಾವಲಂಭಿಯಾಗುವ ಸಂಕಲ್ಪವಿದೆ. 2027 ರವರೆಗೆ ಗೋವಾ ರಾಜ್ಯದಲ್ಲಿ 150 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಗೋವಾ ರಾಜ್ಯದಲ್ಲಿಯೇ ಮಾಡಲಾಗುವುದು ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





