ರಾಮನಗರ ಜಿಲ್ಲೆಯ ಕನಕಪುರ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಚಾಲಕ ಶಿವಕುಮಾರ್ ಮೇಲೆ ಡಿಪೋ ಮ್ಯಾನೇಜರ್ ಸಚಿನ್ ಹಾಗೂ ಅವರ ಸಹಚರರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಟ್ರಿಪ್ ಮುಗಿಸಿ ಡಿಪೋಗೆ ಬಂದ ವೇಳೆ ಜಗಳ ನಡೆದು, ಹಲವರು ಸೇರಿ ಥಳಿಸಿದ್ದಾರೆ ಎನ್ನಲಾಗಿದೆ. ಹಲ್ಲೆ ವೇಳೆ ಶಿವಕುಮಾರ್ ಅವರನ್ನು ಡಿಪೋ ಆವರಣದಲ್ಲೇ ಅಟ್ಟಾಡಿಸಿಕೊಂಡು ಹೋಗಿ ಕೆಳಗೆ ಬಿದ್ದ ಬಳಿಕವೂ ಕಾಲಿನಿಂದ ಒದ್ದು ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಜಗಳ ಬಿಡಿಸಲು ಬಂದ ಟ್ರಾಫಿಕ್ ಕಂಟ್ರೋಲರ್ ಮೇಲೆಯೂ ಹಲ್ಲೆ ನಡೆಸಿರುವುದಾಗಿ ಹೇಳಲಾಗಿದೆ. ಡಿಪೋದಲ್ಲಿನ ಅವ್ಯವಹಾರ ಮತ್ತು ಲಂಚದ ಬಗ್ಗೆ ಪ್ರಶ್ನೆ ಮಾಡಿದ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂದು ಶಿವಕುಮಾರ್ ಆರೋಪಿಸಿದ್ದು, ಕನಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

