ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿರುವ ಪಂಜಾಬಿ ತಡ್ಕಾ ರೆಸ್ಟೋರೆಂಟ್‌ನಲ್ಲಿ ಭಾನುವಾರ ಮುಂಜಾನೆ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಮೂರು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಸಂಪೂರ್ಣ ಕಟ್ಟಡ ಬೆಂಕಿಗೆ ಆಹುತಿಯಾಗಿದೆ. ಗೋವಿಂದಪುರಿ ಫ್ಲೈಓವರ್ ಸಮೀಪ ಬೆಳಗ್ಗೆ 4.45ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ನೆಲಮಾಳಿಗೆಯಿಂದ ಮೂರನೇ ಮಹಡಿ ಹಾಗೂ ಟೆರೇಸ್ ಮೇಲಿನ ತಾತ್ಕಾಲಿಕ ನಿರ್ಮಾಣಗಳವರೆಗೆ ವ್ಯಾಪಿಸಿತು. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಆರು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು. ಈ ವೇಳೆ ರೆಸ್ಟೋರೆಂಟ್ ಒಳಗೆ ಸಿಲುಕಿದ್ದ 75 ವರ್ಷದ ಸೀತಾ ದೇವಿ ಅವರನ್ನು ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದರು. ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಬೆಂಕಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ದೆಹಲಿಯ ಮಾಳವೀಯ ನಗರದಲ್ಲೂ ನಡೆದ ಭೀಕರ ಬೆಂಕಿ ಅವಘಡದ ಬಳಿಕ ಈ ಘಟನೆ ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

