ಬೆಂಗಳೂರಿನಲ್ಲಿ ಹೂಡಿಕೆ ಮೇಲೆ ಅಧಿಕ ಲಾಭ ನೀಡುವುದಾಗಿ ನಂಬಿಸಿದ ಸೈಬರ್ ಕಳ್ಳರು ವ್ಯಕ್ತಿಯೊಬ್ಬರಿಗೆ 55.88 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಮಹದೇವಪುರ ಸಮೀಪದ ನಾರಾಯಣಪುರ ನಿವಾಸಿ ಪಿ.ಕೆ. ಪಟೇಲ್ ವಂಚನೆಗೆ ಒಳಗಾದವರು. ವಾಟ್ಸ್‌ಆಯಪ್ ಗ್ರೂಪ್‌ಗೆ ಸೇರಿಸಿ ಟ್ರೇಡಿಂಗ್ ಮತ್ತು ಹೂಡಿಕೆ ಕುರಿತು ನಂಬಿಕೆ ಮೂಡಿಸಿದ ಆರೋಪಿಗಳು, ಆ್ಯಪ್ ಡೌನ್‌ಲೋಡ್ ಮಾಡಿಸಿ ಆರಂಭದಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ಬಳಿಕ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 55.88 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ನಂತರ ಹಣ ಹಿಂಪಡೆಯಲು ಯತ್ನಿಸಿದಾಗ ಮತ್ತಷ್ಟು ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದು, ಅನುಮಾನಗೊಂಡ ಪಟೇಲ್ ಪರಿಶೀಲನೆ ನಡೆಸಿದ ವೇಳೆ ವಂಚನೆ ಬೆಳಕಿಗೆ ಬಂದಿದೆ. ಈ ಕುರಿತು ಸೈಬರ್ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

