Breaking News

ಬೆಂಗಳೂರಲ್ಲಿ ಮುಂದುವರಿದ ದರೋಡೆ ಹಾವಳಿ: ಉದ್ಯಮಿಯ ವಾಹನ ತಡೆದು ₹1.09 ಕೋಟಿ ದೋಚಿದ ದುಷ್ಕರ್ಮಿಗಳು!

ಬೆಂಗಳೂರು: ಯಲಹಂಕ ಸಮೀಪ ಉದ್ಯಮಿಯೊಬ್ಬರ ಬಳಿ 1.09 ಕೋಟಿ ರೂ. ದರೋಡೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಶಿವಶಂಕರ್ ಮೇಲೆ ಏಳು ಮಂದಿ ಸಶಸ್ತ್ರ ದುಷ್ಕರ್ಮಿಗಳು ಹಲ್ಲೆ ನಡೆಸಿ ನಗದು ತುಂಬಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಜೂನ್ 15ರ ರಾತ್ರಿ ನಿರ್ಜನ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, ಹಲ್ಲೆಯಿಂದ ಶಿವಶಂಕರ್ ಗಾಯಗೊಂಡಿದ್ದಾರೆ. ಹೊಸ ಉದ್ಯಮಕ್ಕೆ ಹೂಡಿಕೆ ಮಾಡಲು ಅವರು ಈ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಹಣ ಸಾಗಾಟದ ಬಗ್ಗೆ ದುಷ್ಕರ್ಮಿಗಳಿಗೆ ಮುಂಚಿತ ಮಾಹಿತಿ ಇದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಉದ್ಯಮದ ಪಾಲುದಾರರ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *