Breaking News

ಬೆಂಗಳೂರನ್ನು ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ : ಪ್ರಿಯಕರನ ಜೊತೆ ಸೇರಿ ಅಪ್ಪ, ಅಮ್ಮ, ತಂಗಿಯನ್ನು ಕೊಂದ ಮಗಳು

ಬೆಂಗಳೂರು ಕೆಆರ್‌ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭೀಕರ ತ್ರಿವಳಿ ಕೊಲೆ ನಡೆದಿದೆ. ತಂದೆ ಸೋಮಸುಂದರ್ (55), ತಾಯಿ ಮುತ್ತುಲಕ್ಷ್ಮೀ (49) ಹಾಗೂ ಪುತ್ರಿ ಸುಪ್ರಿಯಾ (20) ಮೃತರಾಗಿದ್ದು, ಹಿರಿಯ ಮಗಳು ಶ್ವೇತಾ ಮತ್ತು ಆಕೆಯ ಪ್ರಿಯಕರ ಕೇತನ್ ಮೇಲೆ ಹತ್ಯೆಯ ಶಂಕೆ ವ್ಯಕ್ತವಾಗಿದೆ. ಶ್ವೇತಾ ಮತ್ತು ಕೇತನ್ ಅವರ ಸಂಬಂಧಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿದ ವೇಳೆ ಚಾಕುವಿನಿಂದ ದಾಳಿ ನಡೆಸಿ ಮೂವರನ್ನೂ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಕೆಆರ್‌ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ದುರ್ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

Share News

About BigTv News

Check Also

ನಡುರಸ್ತೆಯಲ್ಲಿ ಯುವಕ ಕಿತ್ತಾಟ – ಕಳ್ಳರೆಂದು ಭಾವಿಸಿ ಧರ್ಮದೇಟು ನೀಡಿದ ಸ್ಥಳೀಯರು

ಬೆಂಗಳೂರು: ಕಳ್ಳರೆಂಬ ಅನುಮಾನದ ಮೇಲೆ ಇಬ್ಬರು ಯುವಕರನ್ನು ಸ್ಥಳೀಯರು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ …

Leave a Reply

Your email address will not be published. Required fields are marked *