ಆನೇಕಲ್: ದಸರಾ ನೋಡಲು ಬಂದಿದ್ದ ತಮಿಳುನಾಡು ಮೂಲದ ಯಲ್ಲಪ್ಪ (56) ಅವರನ್ನು ದುಷ್ಕರ್ಮಿಗಳ ಗುಂಪೊಂದು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಆನೇಕಲ್‌ನ ಚಿಕ್ಕಕೆರೆ ಮೈದಾನದಲ್ಲಿ ಬುಧವಾರ ರಾತ್ರಿ ನಡೆದಿದೆ. ಕಳೆದ 10 ವರ್ಷಗಳಿಂದ ತಟ್ಟನಹಳ್ಳಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ, ದಸರಾ ನೋಡಲು ಬಂದಿದ್ದರು. ರಾತ್ರಿ ಮದ್ಯ ಸೇವಿಸುವ ವೇಳೆ ಗಲಾಟೆ ನಡೆದಿದ್ದು, ದುಷ್ಕರ್ಮಿಗಳು ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಶೇಷವೆಂದರೆ, ಆರೋಪಿಗಳೇ ಮೃತರ ಮೊಬೈಲ್‌ನಿಂದ 112ಕ್ಕೆ ಕರೆ ಮಾಡಿ ಮೃತದೇಹ ಪತ್ತೆಯಾದ ಬಗ್ಗೆ ಮಾಹಿತಿ ನೀಡಿ, ಬಳಿಕ ಮೊಬೈಲ್‌ನೊಂದಿಗೆ ಪರಾರಿಯಾಗಿದ್ದಾರೆ. ಆನೇಕಲ್ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
