ಧಾರವಾಡ: ನಗರ ಹೊರವಲಯದ ತಡಸಿನಕೊಪ್ಪ ಸರಹದ್ದಿನ ಜಮೀನಿನಲ್ಲಿ ಮೇ 26ರಂದು ನಡೆದಿದ್ದ ಫೈರಿಂಗ್ ಪ್ರಕರಣದ ಪ್ರಮುಖ ಆರೋಪಿ ಸುಂದರ್ ಪೌಲ್ನನ್ನು ಹುಬ್ಬಳ್ಳಿ- ಧಾರವಾಡ ನಗರ ಪೊಲೀಸರು ತಮಿಳುನಾಡಿನ ನಾಗಪಟ್ಟಣಂದಲ್ಲಿ ಮಂಗಳವಾರ ಬಂಧಿಸಿದ್ದಾರೆ. ತಡಸಿನಕೊಪ್ಪ ವಿವಾದಿತ ಜಮೀನು ವಿಚಾರವಾಗಿ ನಡೆದ ಗಲಾಟೆಯಲ್ಲಿ ಸುಂದರ್ ಪಾಲ್ ಹಾಗೂ ಇನ್ನೊಬ್ಬ ವಿಠ್ಠಲ ವಾಲೀಕಾರ ಎಂಬಾತನ ಕಾಲಿಗೆ ಗುಂಡು ಹಾರಿಸಿದ್ದರು. ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮೇ 27ರಂದು ಫಿಲೋಮಿನಾ, ಪ್ರವಿಣ ಸುತಾರ, ಇಂದ್ರಪಾಲ್ ಸಿಂಗ್, ಬೆಂಜಮಿನ್, ವಿಶಾಲ ಜಾಧವ ಎಂಬುವರನ್ನು ಬಂಧಿಸಿದ್ದರು. ಆದರೆ, ಪ್ರಮುಖ ಆರೋಪಿ ಸುಂದರ್ ಪೌಲ್ ಪರಾರಿಯಾಗಿದ್ದ. ಬೆಂಗಳೂರು, ತಮಿಳುನಾಡಿನ ಕೊಡೈಕೆನಾಲ್, ಗೋವಾ, ಜಾರ್ಖಂಡ್, ಓಡಿಶಾದ ಗೋಪಾಲಪುರ, ಪಶ್ಚಿಮ ಬಂಗಾಳದ ಸಿಲಿಗುರಿ, ಉತ್ತರ ಪ್ರದೇಶದ ಗೋರಖಪುರ, ವಾರಾಣಸಿ ಮತ್ತು ನೇಪಾಳ ದೇಶದಲ್ಲಿ ಸುತ್ತಾಡಿದ್ದ. ಈತನ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ, ತಮಿಳುನಾಡಿನ ನಾಗಪಟ್ಟಣಂನಲ್ಲಿ ಗುರುತು ಮರೆಮಾಚಿ ಆಶ್ರಯ ಪಡೆದಿದ್ದ ಸುಂದರ್ ಪೌಲ್ನನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

